ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ! ಹಾಗಂದ್ರೆ ಏನು?

masthmagaa.com:

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಕೆಸರು ಬಣ್ಣದಿಂದ ಕೂಡಿದ ನೀರು, ಪ್ರವಾಹದ ರೀತಿಯಲ್ಲಿ ಭೋರ್ಗರೆದು ಹರಿಯುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ. ಭಾಗ್ಶು ನಾಗ್ ಪ್ರದೇಶದಲ್ಲಿ ರಸ್ತೆಯಲ್ಲಿ ನಿಲ್ಲಿದ್ದ ಕಾರುಗಳೆಲ್ಲಾ ಒಣ ಎಲೆಗಳಂತೆ ಕೊಚ್ಚಿಹೋಗಿವೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿವೆ. ಹಿಮಾಚಲ ಪ್ರದೇಶಕ್ಕೆ ಕೇಂದ್ರ ಸರ್ಕಾರ ಎನ್​ಡಿಆರ್​ಎಫ್​ ತಂಡಗಳನ್ನ ಕಳಿಸಿಕೊಟ್ಟಿದೆ.

ಹಾಗಾದರೆ ಹೇಗೆ ಆಗುತ್ತೆ ಈ ಮೇಘಸ್ಪೋಟ?
ಇದ್ದಕ್ಕಿದ್ದ ಹಾಗೆ ಮೋಡ ಹೊಡೆದು ಹೋಗಿ ನೀರು ಕೆಳಗೆ ಚೆಲ್ಲುತ್ತೆ ಅಂತ ಅಲ್ಲ! ಭೂಮಿಯಿಂದ ಬಿಸಿಗಾಳಿ ವಿಪರೀತ ವೇಗದಲ್ಲಿ ಮೇಲಕ್ಕೆ ಏರಿದಾಗ ಕೆಲವೊಮ್ಮೆ ಮೋಡಗಳಲ್ಲಿರುವ ನೀರಿನ ಹನಿಗಳು ಕೆಳಕ್ಕೆ ಬೀಳುವ ಬದಲಾಗಿ ಮತ್ತಷ್ಟು ಮೇಲಕ್ಕೆ ಎತ್ತಲಪಡುತ್ತವೆ. ಆಗ ಮತ್ತಷ್ಟು ಹೊಸ ಹನಿಗಳಂತೂ ಹೇಗೂ ಸೃಷ್ಟಿಯಾಗುತ್ತಿರುತ್ತವೆ. ಜೊತೆಗೆ ಆಗಲೇ ಇದ್ದ ನೀರಿನ ಹನಿಗಳು ಗಾತ್ರದಲ್ಲಿ ಮತ್ತಷ್ಟು ದಪ್ಪ ಆಗುತ್ತಾ ಹೋಗುತ್ತವೆ. ಒಂದು ಹಂತ ದಾಟಿದಾಗ ನೀರಿನ ಹನಿಗಳು ತುಂಬಾ ಭಾರವಾಗಿ ಮೋಡಕ್ಕೆ ಇವುಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ ಆಗುವುದಿಲ್ಲ. ಆಗ ಒಂದೇ ಏರಿಯಾದ ಮೇಲೆ ದಿಢೀರಂತ ಆಕಾಶಕ್ಕೆ ತೂತು ಬಿದ್ದಂತೆ ನೀರು ಕೆಳಗೆ ಚೆಲ್ಲುತ್ತದೆ. ಕೆಲವೊಮ್ಮೆ ಭಾರಿ ಪ್ರಮಾಣದಲ್ಲಿ ಸಾವು-ನೋವು ಕೂಡ ಉಂಟಾಗುತ್ತದೆ. ಇದನ್ನೇ ಮೇಘಸ್ಪೋಟ ಅಂತ ಹೇಳುತ್ತಾರೆ‌.

-masthmagaa.com

Contact Us for Advertisement

Leave a Reply