ವಿಯೆನ್ನಾದಲ್ಲಿ ಉಗ್ರರ ದಾಳಿಗೆ ಮೂವರು ಬಲಿ

masthmagaa.com:

ಆಸ್ಟ್ರಿಯಾ: ವಿಯೆನ್ನಾದಲ್ಲಿ ಉಗ್ರರು ದಾಳಿ ನಡೆಸಿದ್ದು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ.. ಆಸ್ಟ್ರಿಯಾದಲ್ಲಿ ಮತ್ತೆ ಕೊರೋನಾ ಲಾಕ್​ಡೌನ್ ವಿಧಿಸಲು ನಿರ್ಧರಿಸಲಾಗಿದೆ. ಹೀಗಾಗಿ ಲಾಕ್​ಡೌನ್​ಗೂ ಮುನ್ನ ಕೊನೆಯದಾಗಿ ಎಲ್ಲರೂ ಬಾರ್ ಮತ್ತು ರೆಸ್ಟೋರೆಂಟ್​​​ಗಳಲ್ಲಿ ಮೋಜು- ಮಸ್ತಿಯಲ್ಲಿ ತೊಡಗಿದ್ರು. ಈ ವೇಳೆ 6 ಪ್ರತ್ಯೇಕ ಸ್ಥಳಗಳಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ದಾಳಿಕೋರರ ಪೈಕಿ ಒಬ್ಬನನ್ನು ಹೊಡೆದುರುಳಿಸಲಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

-masthmagaa.com

Contact Us for Advertisement

Leave a Reply