ಅದಾನಿ ಬಾಚಿ ತಬ್ಬಿಕೊಂಡ ವಿಯೆಟ್ನಾಂ: ಭಾರಿ ಹೂಡಿಕೆಗೆ ಸಮೂಹ ಪ್ಲಾನ್‌

masthmagaa.com:

ಆಸಿಯಾನ್‌ ರಾಷ್ಟ್ರ ವಿಯೆಟ್ನಾಂ ಪ್ರಧಾನಿ ಪಾಮ್‌ ಮಿನ್‌ ಚಿನ್‌ ಅದಾನಿ ಸಮೂಹಗಳ ಚೇರ್‌ಮನ್‌ ಗೌತಮ್‌ ಅದಾನಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ವಿಯೆಟ್ನಾಂನಲ್ಲಿ 10 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 83 ಸಾವಿರ ಕೋಟಿ ಹೂಡಿಕೆ ಮಾಡೋ ಪ್ಲಾನ್‌ ಹಾಕಿರೋ ಸಮೂಹಕ್ಕೆ ರತ್ನಗಂಬಳಿ ಹಾಸಿ ಪ್ರಧಾನಿ ವೆಲ್‌ಕಮ್‌ ಮಾಡಿದ್ದಾರೆ. ಅಲ್ಲದೆ ಮೂಲಸೌಕರ್ಯ ಹಾಗೂ ಪುನರ್ಬಳಕೆ ಇಂಧನಗಳ ಸೆಕ್ಟರ್‌ನಲ್ಲಿ ಅದಾನಿ ಗ್ರೂಪ್ಸ್‌ ಸೇರಿದಂತೆ ಭಾರತದ ಎಲ್ಲಾ ಕಂಪನಿಗಳಿಗೂ ವಿಯೆಟ್ನಾಂ ಬಾಗಿಲು ತೆರೆದಿದೆ. ಭಾರತದ ಕಂಪನಿಗಳು ಪರಿಣಾಮಕಾರಿಯಾಗಿ ವಿಯೆಟ್ನಾಂನಲ್ಲಿ ಇನ್ವೆಸ್ಟ್‌ ಮಾಡೋದನ್ನ ಸಪೋರ್ಟ್‌ ಮಾಡ್ತೀವಿ ಅಂತ ಪಾಮ್‌ ಮಿನ್‌ ಚಿನ್‌ ಹೇಳಿದ್ದಾರೆ. ಈ ವೇಳೆ ಮಾತನಾಡಿರೋ ಗೌತಮ್‌ ಅದಾನಿ ವಿಯೆಟ್ನಾಂನಲ್ಲಿ ಲಾಜಿಸ್ಟಿಕ್ಸ್‌, ಮೂಲಸೌಕರ್ಯ, ಬಂದರುಗಳ ಅಭಿವೃದ್ಧಿಗೆ ಈ ಹಣವನ್ನ ಉಪಯೋಗಿಸಲಾಗತ್ತೆ. ಅದ್ರಲ್ಲೂ ಡಾ ನಾಂಗ್‌ನ ನಗರದ ಲಿಯೆನ್‌ ಚಿಯೆವು ಪೋರ್ಟ್‌ ಪ್ರಾಜೆಕ್ಟ್‌ನ್ನ ಹೈಲೈಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply