ವಿಜಯ್‌ಗೆ ಒಂದೇ ದಿನಕ್ಕೆ ಇನ್ಸ್ಟಾಗ್ರಾಂನಲ್ಲಿ 4.7 ಮಿಲಿಯನ್ ಫಾಲೋವರ್ಸ್!

masthmagaa.com:

ತಮಿಳು ನಟ ವಿಜಯ್‍ಗೆ ಸಖತ್‌ ಫ್ಯಾನ್ಸ್ ಇದ್ದಾರೆ. ಇದೀಗ ವಿಜಯ್ ಅವರು ಇನ್‍ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ಒಂದೇ ದಿನದಲ್ಲಿ 4.7 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಕೀರ್ತಿ ಸುರೇಶ್‌ ಇನ್‍ಸ್ಟಾಗ್ರಾಮ್‍ನಲ್ಲಿ ನಟನನ್ನು ಅನುಸರಿಸಿದ ಮೊದಲ ನಟಿಯರು. ವಿಜಯ್‌ ಇನ್‍ಸ್ಟಾಗ್ರಾಂ ಖಾತೆ ತೆರೆದು ತಮ್ಮ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅದರ ಜೊತೆಗೆ ಹಲೋ ಗೆಳೆಯ, ಗೆಳೆತಿಯರೇ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಈ ಫೋಟೋಗೆ 50 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನಟ ತನ್ನ ಮೊದಲ ಪೋಸ್ಟ್ ಅನ್ನು ಅಪ್‍ಲೋಡ್ ಮಾಡಿದ ಕೂಡಲೇ, ಅಭಿಮಾನಿಗಳು, “ಸ್ವಾಗತ ದಳಪತಿ”, “ಸಿನಿಮಾದ ದೊರೆ ದಳಪತಿ ವಿಜಯ್ ಮಾತ್ರ” ಎಂದು ಕಾಮೆಂಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply