ಸಂಚಾರಿ ವಿಜಯ್ ಸ್ಥಿತಿ ಗಂಭೀರ | ಭೀಕರ ಅಪಘಾತದಲ್ಲಿ ಬ್ರೇನ್ ಡ್ಯಾಮೇಜ್

masthmagaa.com:

ನಟ ಸಂಚಾರಿ ವಿಜಯ್ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ ಸಂಚಾರಿ ವಿಜಯ್ ಗೆ ಬೈಕ್ ಅಪಘಾತ ಆಗಿದೆ. ಈ ಅಪಘಾತದಲ್ಲಿ ವಿಜಯ್ ಗಂಭೀರವಾಗು ಗಾಯಗೊಂಡಿದ್ದಾರೆ. ಕೂಡಲೇ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರೋ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ. ಆದ್ರೆ ತಲೆಗೆ ತೀವ್ರ ಪೆಟ್ಟಾಗಿದ್ದು ಮೆದುಳಿನ ಬಲಭಾಗದಲ್ಲಿ ಬ್ಲೀಡಿಂಗ್ ಆಗಿದೆ. ಜೊತೆಗೆ ದೇಹದ ಇತರ ಭಾಗಗಳಿಗೂ ತೀವ್ರ ಪೆಟ್ಟಾಗಿದ್ದು, ತೊಡೆಗೆ ದೊಡ್ಡ ಪ್ರಮಾಣದ ಗಾಯಗಳಾಗಿವೆ ಅಂತ ಗೊತ್ತಾಗಿದೆ. ಸೀರಿಯಸ್ ಆಗಿರೋ ಸಂಚಾರಿ ವಿಜಯ್ಗೆ ನಿನ್ನೆ ರಾತ್ರಿಯೇ ವೈದ್ಯರು ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಆದ್ರೂ ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಅಂತಾ ಮಾಹಿತಿ ಬಂದಿದೆ.

ಸಂಚಾರಿ ವಿಜಯ್ ಗೆ ನಾನು ಅವನಲ್ಲ ಅವಳು ಸಿನೆಮಾದಲ್ಲಿ ತೃತೀಯ ಲಿಂಗಿಯ ಪಾತ್ರಕ್ಕಾಗಿ, ನ್ಯಾಶನಲ್ ಫಿಲ್ಮ್ ಫೇರ್ ಅತ್ಯತ್ತಮ ನಟ ಅವಾರ್ಡ್ ಬಂದಿತ್ತು. ನಾಟಕ ಕ್ಷೇತ್ರದ ಹಿನ್ನೆಲೆ ಹೊಂದಿರೋ ಸಂಚಾರಿ ವಿಜಯ್ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನೆಮಾಗಳಲ್ಲೂ ಕೆಲಸ ಮಾಡಿದ್ದಾರೆ. ಸಂಚಾರಿ ಹೆಸರಿನ ಸಾಂಸ್ಕೃತಿಕ ಕೇಂದ್ರದ ಮೂಲಕ ತಮ್ಮ ಥಿಯೇಟರ್ ಯಾನ ಆರಂಭಿಸಿದ್ದ ಕಾರಣ ಸಂಚಾರಿ ಅನ್ನೋ ಪದ ಅವರ ಹೆಸರಿನ ಮುಂದೆ ಸೇರಿಕೊಂಡಿದೆ. ನಾತಿಚರಾಮಿ, ಆಕ್ಟ್ ೧೯೭೮ ರಂತಹ ಉತ್ತಮ ಚಿತ್ರಗಳಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ.

ಸಂಚಾರಿ ವಿಜಯ್ ಒಬ್ಬ ಪ್ರತಿಭಾವಂತ ನಟ, ಯುವ ನಟ, ವಯಸ್ಸು ೩೭ ಮಾತ್ರ. ದೇವರು ಅವರಿಗೆ ಶೀಘ್ರ ಚೇತರಿಕೆ ಕರುಣಿಸಲು, ಬೇಗ ಅವರು ಗುಣಮುಖರಾಗಿ ಮತ್ತೆ ನಮ್ಮೊಂದಿಗೆ ಬರುವಂತಾಗಲಿ ಅಂತಾ ಆಶಿಸೋಣ.

-masthmagaa.com

Contact Us for Advertisement

Leave a Reply