ವಿಮಾನದಲ್ಲೇ ಮದುವೆ.. ಕಿಲಾಡಿ ಜೋಡಿ ಕಥೆ ಏನು?

masthmagaa.com:

ಕೊರೋನಾ ಹಾವಳಿ ಹಿನ್ನೆಲೆ ದೇಶದ ಹಲವು ರಾಜ್ಯಗಳಲ್ಲಿ ಲಾಕ್​ಡೌನ್ ಇದೆ. ಮದುವೆ ಸೇರಿದಂತೆ ಎಲ್ಲಾ ಫಂಕ್ಷನ್​​​​​ಗೆ ನಿರ್ಬಂಧ ಇದೆ. ಮದ್ವೆಗೆ ಇಂತಿಷ್ಟೇ ಜನ ಸೇರಬೇಕು ಅನ್ನೋ ರೂಲ್ಸ್ ಇದೆ. ಅದೇ ರೀತಿ ತಮಿಳುನಾಡಲ್ಲೂ ಮದುವೆ ಸೇರಬಹುದಾದ ಜನರ ಸಂಖ್ಯೆ ಮೇಲೆ ನಿರ್ಬಂಧ ಇದೆ. ಹೀಗಾಗಿ ಮಧುರೈನ ಜೋಡಿ ರಾಕೇಶ್‌ ಮತ್ತು ದಕ್ಷಿಣಾ ನಿಮ್ ರೂಲ್ಸ್ ಏನಿದ್ರೂ ಭೂಮಿ ಮೇಲೆ ನಾವು ಆಕಾಶದಲ್ಲಿ ಮದ್ವೆ ಆಗ್ತೀವಿ ಅಂತ 161 ಜನರನ್ನು ಸೇರಿಸಿ ಮದ್ವೆ ಆಗಿದ್ಧಾರೆ. ಸ್ಪೈಸ್‌ ಜೆಟ್‌ ಬುಕ್ ವಿಮಾನವನ್ನು 2 ಗಂಟೆಗಳಿಗೆ ಬುಕ್ ಮಾಡಿದ್ದಾರೆ. ವಿಮಾನ ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯದ ಮೇಲೆ ಹಾರುವಾಗ ಇಬ್ರೂ ಮದ್ವೆ ಆಗಿದ್ಧಾರೆ. ಇದನ್ನ ವಿಡಿಯೋ ಕೂಡ ಮಾಡಿದ್ದು, ಒಬ್ಬರ ಮುಖದಲ್ಲೂ ಮಾಸ್ಕ್ ಇಲ್ಲ.. ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ..ಈ ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಸ್ಪೈಸ್​ ಜೆಟ್ ವಿಮಾನ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಮಾನ ನಿಲ್ದಾಣ ಸಿಬ್ಬಂದಿ, ಎಲ್ಲರೂ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ತಂದಿದ್ರು. ಅವರು ಮದ್ವೆಯಾಗೋಕೆ ವಿಮಾನ ಬುಕ್ ಮಾಡಿದ್ದಾರೆ ಅಂತ ನಮಗೆ ಗೊತ್ತಿರಲಿಲ್ಲ ಅಂತ ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply