masthmagaa.com:

2020 ಮುಗಿಯೋಕೆ ಇನ್ನು 4 ದಿನ ಬಾಕಿ ಇರುವಾಗಲೇ ಈ ದಶಕದ ಟಿ-20, ಒಂಡೇ ಮತ್ತು ಟೆಸ್ಟ್ ತಂಡಗಳನ್ನ ಐಸಿಸಿ ಘೋಷಿಸಿದೆ. ವಿಶೇಷ ಅಂದ್ರೆ ಐಸಿಸಿ ದಶಕದ ಟಿ-20 ಮತ್ತು ಒಂಡೇ ತಂಡಗಳಿಗೆ ಧೋನಿ ನಾಯಕನಾದ್ರೆ, ಟೆಸ್ಟ್​ ತಂಡಕ್ಕೆ ವಿರಾಟ್​ ಕೊಹ್ಲಿಯನ್ನ ನಾಯಕನಾಗಿ ಐಸಿಸಿ ಹೆಸರಿಸಿದೆ. ಇಬ್ಬರೂ ಭಾರತದವರೇ ಅನ್ನೋದು ಹೆಮ್ಮೆಯ ವಿಚಾರ. ಐಸಿಸಿ ಟಿ-20 ಟೀಂ ಆಫ್ ದಿ ಡಿಕೇಡ್​​ನಲ್ಲಿ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ಧೋನಿ ಮತ್ತು ಬೂಮ್ರಾ ಸ್ಥಾನ ಪಡೆದಿದ್ದಾರೆ. ಐಸಿಸಿ ಒಂಡೇ ಟೀಂ ಆಫ್​ ದಿ ಡಿಕೇಡ್​ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಧೋನಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಐಸಿಸಿ ಟೆಸ್ಟ್ ಟೀಂ ಆಫ್ ದಿ ಡಿಕೇಡ್​ನಲ್ಲಿ ವಿರಾಟ್​ ಕೊಹ್ಲಿ ಮತ್ತು ಆರ್. ಅಶ್ವಿನ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮೂರೂ ತಂಡಗಳಲ್ಲಿ ಯಾವ ಯಾವ ಆಟಗಾರರು ಇದ್ದಾರೆ ಅನ್ನೋದು ಇಲ್ಲಿದೆ ನೋಡಿ.

 

 

-masthmagaa.com

Contact Us for Advertisement

Leave a Reply