ಲಾಂಚ್‌ ಆಗಲಿದೆ ಚೀನಾದ Vivo V30 Pro! ವಿಶೇಷತೆ ಏನು?

masthmagaa.com:

ಚೀನಾದ ವಿವೋ ತನ್ನ ಹೊಸ ಸ್ಮಾರ್ಟ್‌ಫೋನ್‌ Vivo V30 Proನ ಇದೇ ತಿಂಗಳು ಲಾಂಚ್‌ ಮಾಡಲಿದೆ. ಇದೇ ಫೆಬ್ರುವರಿ 28 ರಂದು Vivo V30 Pro ಗ್ಯಾಜೆಟ್‌ಗಳ ಮಾರ್ಕೆಟ್‌ಗೆ ಕಾಲಿಡೋಕೆ ರೆಡಿಯಾಗಿದೆ. ಇತ್ತೀಚೆಗಷ್ಟೇ ಈ ಕಂಪನಿ Vivo V30 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿತ್ತು. ಇದ್ರ ಬೆನ್ನಲ್ಲೇ Vivo V30 Pro ಬಗ್ಗೆ ಕಂಪನಿ ಹಿಂಟ್‌ ಕೂಡ ಕೊಟ್ಟಿತ್ತು. ಇದೀಗ ಲಾಂಚ್‌ ಆಗೋದಕ್ಕೆ ಸಿದ್ದವಾಗಿರೋ Vivo V30 Pro, ಗ್ರೀನ್‌ ಸೀ, ನೈಟ್‌ ಸ್ಕೈ ಬ್ಲ್ಯಾಕ್‌ ಮತ್ತು ಪರ್ಲ್‌ ವೈಟ್‌ ಕಲರ್ಸ್‌ನಲ್ಲಿ ಲಭ್ಯವಿರಲಿದೆ. ಇದು 50 ಮೆಗಾಪಿಕ್ಸೆಲ್‌ ಪ್ರೈಮರಿ ಕ್ಯಾಮೆರಾ ಹೊಂದಿದೆ. ಅಷ್ಟೇ ಅಲ್ದೇ ಪ್ರಮುಖವಾಗಿ, ಈ ಸ್ಮಾರ್ಟ್‌ಫೋನ್‌ನ ಎಲ್ಲಾ ಮೂರು ಕ್ಯಾಮೆರಾಗಳಲ್ಲಿ ಜ಼ಾಯಿಸ್‌ (Zeiss) ಲೆನ್ಸ್‌ಗಳನ್ನ ಅಳವಡಿಸಲಾಗಿದೆ. 120Hz ರೀಫ್ರೆಶ್‌ ರೇಟ್‌ನೊಂದಿಗೆ 3D curved ಡಿಸ್ಪ್ಲೇ ಕೂಡ ಒಳಗೊಂಡಿದೆ. ಇನ್ನು ಇದ್ರ ಇಂಟರ್‌ನಲ್‌ ಸ್ಟೋರೇಜ್‌ ಬಗ್ಗೆ ಮಾತನಾಡೋದಾದ್ರೆ…ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ. 12GB RAMನೊಂದಿಗೆ 256GB ಮತ್ತು 512GB ಸ್ಟೋರೇಜ್‌ ಆಪ್ಶನ್‌ಗಳಿವೆ.

-masthmagaa.com

Contact Us for Advertisement

Leave a Reply