UAE ಅಧ್ಯಕ್ಷರನ್ನ ಮೀಟ್‌ ಮಾಡಿದ ಪುಟಿನ್!

masthmagaa.com:

ರಷ್ಯಾ-ಯುಕ್ರೇನ್‌ ಯುದ್ಧ ಕುರಿತು ಅಷ್ಟೆಲ್ಲಾ ಆಗ್ತಿದ್ರೆ, ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ UAEಯ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ (MBZ) ಅವ್ರನ್ನ ಮೀಟ್‌ ಮಾಡಿದ್ದಾರೆ. ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ MBZ ಅವ್ರನ್ನ ಮೀಟ್‌ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ UAE ಜೊತೆಗಿನ ಸಂಬಂಧಗಳನ್ನ ಹೊಗಳಿರೊ ಪುಟಿನ್‌, ಎಮಿರೇಟ್ಸ್‌ ಅವರು ಒಳ್ಳೆಯ ಪಾರ್ಟ್ನರ್ ಅಂತ ಹೇಳಿದಾರೆ. ಜೊತೆಗೆ ಯುಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧ ಖೈದಿಗಳ ಎಕ್ಸ್‌ಚೇಂಜ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ MBZ ಅವ್ರಗೆ ಥ್ಯಾಂಕ್ಸ್‌ ಹೇಳಿದ್ದಾರೆ. ಇತ್ತ ಸಂಘರ್ಷವನ್ನ ಮತ್ತಷ್ಟು ಉದ್ವಿಗ್ನಗೊಳಿಸದೇ ರಾಜಕೀಯ ಮಾರ್ಗದಿಂದ ಅಂತ್ಯಗೊಳಿಸಬೇಕು ಅಂತ MBZ ಹೇಳಿದ್ದಾರೆ. ಅಂದ್ಹಾಗೆ ರಷ್ಯಾ ಹಾಗೂ UAE ಓಪಕ್‌+ನ ಸದಸ್ಯ ರಾಷ್ಟ್ರಗಳಾಗಿದ್ದು, ಉತ್ತಮ ಸಹಕಾರ ಸಂಬಂಧವನ್ನ ಹೊಂದಿವೆ.

-masthmagaa.com

Contact Us for Advertisement

Leave a Reply