ಯುಕ್ರೇನ್- ರಷ್ಯಾ ಯುದ್ಧ: ಪುಟಿನ್ ಮಗಳಿಗೆ ಸಂಕಷ್ಟ!

masthmagaa.com:

ರಷ್ಯಾ ದಾಳಿಯಿಂದ ಯುಕ್ರೇನ್ ಜನತೆಯ ಕನಸುಗಳು ಮಾತ್ರ ಛಿದ್ರವಾಗಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೊಡ್ಡ ಮಗಳು 36 ಡಾಕ್ಟರ್ ಮರಿಯಾ ವೊರೊನ್​​ಸ್ಟೋವಾ ಕನಸುಗಳು ಕೂಡ ನುಚ್ಚು ನೂರಾಗಿವೆ ಅಂತ ಈಗ ವರದಿಯಾಗಿದೆ. ಯೆಸ್​​..ಮರಿಯಾ ವೊರೊನ್​ಸ್ಟೋವಾ ಪುಟಿನ್​​ ಕೆಜಿಬಿ ಗೂಢಾಚಾರಿಯಾಗಿದ್ದಾಗ ಜನಿಸಿದ್ರು. ಮಕ್ಕಳ ಅನುವಂಶೀಯ ಕಾಯಿಲೆಗಳಲ್ಲಿ ಎಕ್ಸ್​​ಪರ್ಟ್​ ಡಾಕ್ಟರ್ ಆಗಿರೋ ಈಕೆ ಸೇಂಟ್ ಪೀಠರ್ಸ್​​ಬರ್ಗ್​​ನಲ್ಲಿ ನಿರ್ಮಾಣವಾಗ್ತಿರೋ ಸೂಪರ್ ಮಾಡರ್ನ್​​ ಮೆಡಿಕಲ್ ಸೆಂಟರ್​​​​ನ ಪ್ರಮುಖ ಪಾಲುದಾರರಾಗಿದ್ರು. ಅದು ಅವರ ಕನಸು ಕೂಡ ಆಗಿತ್ತು. ದುಬೈ ಮತ್ತು ಪಾಶ್ಚಿಮಾತ್ಯ ದೇಶಗಳಿಂದ ದೊಡ್ಡ ದೊಡ್ಡ ಕುಳಗಳು ಬದು ಟ್ರೀಟ್ಮೆಂಟ್ ತಗೊಳ್ತಾರೆ ಅನ್ನೋ ಉದ್ದೇಶದಿಂದಲೇ ಈ ಮೆಡಿಕಲ್ ಸೆಂಟರ್ ನಿರ್ಮಿಸಲಾಗ್ತಿತ್ತು. ಆದ್ರೀಗ ರಷ್ಯಾ ಯುಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಸಾಲು ಸಾಲು ನಿರ್ಬಂಧಗಳನ್ನು ಹೇರಿವೆ. ಇನ್ನು ಗಲ್ಫ್​ ದೇಶಗಳ ಶೇಖ್​​ಗಳಾಗಲೀ, ಪಾಶ್ಚಿಮಾತ್ಯ ದೇಶಗಳ ಕುಳಗಳಾಗಲೀ ಟ್ರೀಟ್ಮೆಂಟ್ ಬರೋದು ಸಧ್ಯಕ್ಕಂತೂ ಸಾಧ್ಯವಿಲ್ಲ. ಹೀಗಾಗಿ ಮರಿಯಾ ವೊರೊನ್​ಸ್ಟೋವಾ ಕನಸು ಭಗ್ನವಾಗಿದೆ. ಇವೆಲ್ಲದ್ರ ನಡುವೆಯೇ ವೊರೊನ್​ಸ್ಟೋವಾ ನೆದರ್​ಲ್ಯಾಂಡ್ ಮೂಲದ ಬ್ಯುಸಿನೆಸ್​ಮನ್​ ಜೋರಿಟ್ ಫಾಸನ್​​ರಿಂದಲೂ ದೂರವಾಗಿದ್ದಾರೆ. ಆದ್ರೆ ಅವರು ದೂರವಾಗಿದ್ದು ಯಾವಾಗ ಯುದ್ಧ ಶುರುವಾದ ನಂತರನಾ ಅಥವಾ ಯುದ್ಧಕ್ಕೂ ಮೊದಲ ಅನ್ನೋ ಬಗ್ಗೆ ಮಾಹಿತಿ ಲಭ್ಯವಿಲ್ಲ. ಈ ದಂಪತಿಗೆ ಮಕ್ಕಳು ಕೂಡ ಇದ್ದು, ಇವರಿಂದಲೇ ಪುಟಿನ್ ಅಜ್ಜ ಅಂತ ಕರೆಸಿಕೊಂಡಿದ್ರು. ಪುಟಿನ್ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಮಾಹಿತಿ ಲೀಕ್ ಆಗೋಕೆ ಬಿಡೋದೇ ಇಲ್ಲ. ಲಭ್ಯವಿರೋ ಮಾಹಿತಿ ಪ್ರಕಾರ ಅವರ ಅಳಿಯ ಫಾಸನ್​ ದೀರ್ಘಕಾಲದಿಂದ ರಷ್ಯಾದಲ್ಲಿ ಕೆಲಸ ಮಾಡ್ಕೊಂಡಿದ್ರು. ಅವರ ತಂದೆ ನೆದರ್​ಲ್ಯಾಂಡ್ ಸೇನೆಯಲ್ಲಿ ಕರ್ನಲ್ ಆಗಿದ್ಧಾರೆ ಅಂತ ಕೂಡ ಮಾಹಿತಿ ಇದೆ. ಆದ್ರೀಗ ಫಾಸನ್ ಮತ್ತು ಮರಿಯಾ ದೂರವಾಗಿದ್ದಾರೆ. ಒಟ್ನಲ್ಲಿ ಯುಕ್ರೇನ್ ಮೇಲಿನ ಯುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಮಗಳ ಬಾಳಲ್ಲೂ ಬಿರುಗಾಳಿ ಎಬ್ಬಿಸಿರೋದಂತು ಸುಳ್ಳಲ್ಲ.

-masthmagaa.com

Contact Us for Advertisement

Leave a Reply