ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಮತ್ತೆ ಆರೋಗ್ಯ ಸಮಸ್ಯೆ: ಕೈ ಮೇಲೆ ವಿಚಿತ್ರ ಗುರುತುಗಳು

masthmagaa:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರವರ ಆರೋಗ್ಯದ ಸಮಸ್ಯೆ ಬಗ್ಗೆ ಮತ್ತೆ ಚರ್ಚೆಗಳು ಆಗ್ತಾ ಇವೆ. ಪುಟಿನ್‌ರ ಕೈ ಮೇಲೆ ವಿಚಿತ್ರ ಗುರುತುಗಳು ಮತ್ತು ಕಪ್ಪು ಬಣ್ಣವನ್ನು ತೋರಿಸೋ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಇದರ ಬೆನ್ನಲ್ಲೇ ಪುಟಿನ್ ಆರೋಗ್ಯದ ಮೇಲೆ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಅಂದ್ಹಾಗೆ ಪುಟಿನ್‌ ಕೈಗಳು ಕಪ್ಪು ಬಣ್ಣಕ್ಕೆ ತಿರುಗಿದಾವೆ. ಇದು ದೇಹದ ಇತರ ಭಾಗಗಳಿಗೆ ಇಂಜೆಕ್ಷನ್‌ ಕೊಡೋಕೆ ಸಾಧ್ಯವಾಗದ ಸಂದರ್ಭದಲ್ಲಿ ಕೈಗಳಿಗೆ ಕೊಟ್ಟಿರೋದನ್ನ ತೋರಿಸುತ್ತೆ ಅಂತ ಬ್ರಿಟನ್‌ನ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಪುಟಿನ್‌ ಕ್ಯಾನ್ಸರ್‌ನಿಂದ ಬಳಲ್ತಾ ಇರ್ಬೋದು ಅಂತ ಕೆಲ ತಿಂಗಳ ಹಿಂದೆ ಅಮೆರಿಕದ ಗುಪ್ತಚರ ಇಲಾಖೆ ವರದಿ ಮಾಡಿತ್ತು.

-masthmagaa

Contact Us for Advertisement

Leave a Reply