ಅಲ್ಪಾಸಂಖ್ಯಾತರ ಮೇಲೆ ದೌರ್ಜನ್ಯ ಎಂದ ಅಮೆರಿಕಗೆ ಬಿಸಿ ಮುಟ್ಟಿಸಿದ ಭಾರತ!

masthmagaa.com:

ಭಾರತದ ಧಾರ್ಮಿಕ ಸ್ವಾತಂತ್ರದ ಬಗ್ಗೆ ವರದಿ ಪ್ರಕಟಿಸಿ ಅಲ್ಪಾಸಂಖ್ಯಾತರ ಮೇಲೆ ದಬ್ಬಾಳಿಕೆ ನಡೀತಿದೆ ಅಂತ ಆರೋಪ ಮಾಡಿದ್ದ ಅಮೆರಿಕಗೆ ಭಾರತ ತಿರುಗೇಟು ಕೊಟ್ಟಿದೆ. ಅಂತರಾಷ್ಟ್ರೀಯ ಸಂಬಂಧಗಳಲ್ಲಿ ವೋಟ್‌ ಬ್ಯಾಂಕ್‌ ರಾಜಕಾರಣ ನಡೀತಿದೆ ಅಂತ ಹೇಳೋ ಮೂಲಕ ಅಮೆರಿಕವನ್ನ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಹೇಳಿಕೆ ಪ್ರಕಟಿಸಿರೋ ವಿದೇಶಾಂಗ ಇಲಾಖೆ ವಕ್ತಾರ ಅರಿಂಧಮ್‌ ಬಗ್ಚಿ ಅಮೆರಿಕ ಮಾಡಿರೋ ವರದಿ ಸಂಪೂರ್ಣವಾಗಿ ಆಧಾರ ರಹಿತ. ದುರಾದೃಷ್ಟಾವಶಾತ್‌ ಅಂತರಾಷ್ಟ್ರೀಯ ಸಂಬಂಧಗಳಲ್ಲೂ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡಲಾಗ್ತಿದೆ. ಇಂತಹ ವರದಿಗಳನ್ನ ಅಮೆರಿಕ ಆದಷ್ಟು ಅವೈಡ್‌ ಮಾಡ್ಬೇಕು. ಭಾರತ ಬಹುಸಂಸ್ಕೃತಿಗಳ ಸಮಾಜ. ಇಲ್ಲಿ ಎಲ್ಲಾ ಧರ್ಮಗಳ ಸ್ವಾತಂತ್ರ, ಹಾಗೂ ಮಾನವ ಹಕ್ಕುಗಳನ್ನ ಗೌರವಿಸಲಾಗುತ್ತೆ ಅಂತ ಟಾಂಗ್‌ ಕೊಟ್ಟಿದ್ದಾರೆ. ಇದೇ ವೇಳೆ ಅಮೆರಿಕದಲ್ಲಿ ಆಗ್ತಿರುವ ಜನಾಂಗೀಯ ದೌರ್ಜನ್ಯಗಳಿಗೆ, ಬಂದೂಕಿನಿಂದಾಗುತ್ತಿರೋ ದುರಂತಗಳಿಗೆ ನಾವು ತೀವ್ರ ಕಾಳಜಿ ವ್ಯಕ್ತಪಡಿಸುತ್ತೇವೆ ಅಂತೇಳುವ ಮೂಲಕ ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣಗಳನ್ನ ಓಡಿಸಿ ಅಂತ ಬಿಸಿ ಮುಟ್ಟಿಸಿದ್ದಾರೆ.

-masthmagaa.com

Contact Us for Advertisement

Leave a Reply