ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಬಿಬಿಸಿ ಡಾಕ್ಯುಮೆಂಟರಿ ನಿಷೇಧ ವಿವಾದ!

masthmagaa.com:

ಗುಜರಾತ್‌ ಗಲಭೆ ಹಾಗೂ ಆ ಸಂಧರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ತಯಾರಿಸಿದ್ದ ಡಾಕ್ಯುಮೆಂಟರಿಯ ನಿಷೇಧವನ್ನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನ ವಿಚಾರಣೆ ಮಾಡೋಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ಫೆಬ್ರುವರಿ 6 ರಂದು ಈ ಬಗ್ಗೆ ವಿಚಾರಣೆ ನಡೆಸೋದಾಗಿ ಸುಪ್ರೀಂಕೋರ್ಟ್‌ ತಿಳಿಸಿದೆ. ಲಾಯರ್‌ ಎಂ.ಎಲ್ ಶರ್ಮಾ ಅವರು ಈ ಅರ್ಜಿ ಸಲ್ಲಿಸಿದ್ದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಈ ಕುರಿತು ಶೀಘ್ರ ವಿಚಾರಣೆ ನಡೆಸ್ಬೇಕು ಅಂತ ಹೇಳಿದ್ದಾರೆ. ಕೇಂದ್ರದ ನಡೆ ಅಸಂವಿಧಾನಿಕ, ದುರುದ್ದೇಶಪೂರಿತ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ. ಹೀಗಾಗಿ ಸಾಕ್ಷ್ಯಾಚಿತ್ರವನ್ನು ನಿಷೇಧಿಸಿ ಅಂತ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಜನವರಿ 23ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಅಂತ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, ಸಾವಿರಾರು ಜನ್ರು ನ್ಯಾಯಾಲಯದ ದಿನಾಂಕಕ್ಕೆ ಕಾಯ್ತಾ ಇದಾರೆ. ಆದ್ರೆ ಈ ರೀತಿ ಅರ್ಜಿಗಳ ಮೂಲಕ ಸುಪ್ರೀಂಕೋರ್ಟ್‌ನ ಅತ್ಯಮೂಲ್ಯ ಸಮಯವನ್ನ ವೇಸ್ಟ್‌ ಮಾಡಲಾಗ್ತಿದೆ ಅಂತ ಅರ್ಜಿ ಸಲ್ಲಿಸಿರೋದಕ್ಕೆ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply