ಅಜ್ಜಿ ಹಣೆಗೆ ಮುತ್ತು ಕೊಟ್ಟು, ನಿಮ್ಮ ದುಡ್ಡು ಬೇಡವೆಂದ ದರೋಡೆಕೋರ..!

ಬ್ರೆಜಿಲ್: ಅಂಗಡಿಗೆ ನುಗ್ಗಿದ ಕಳ್ಳನೊಬ್ಬ ವೃದ್ಧ ಮಹಿಳೆಯ ಬಳಿ ಹಣ ಪಡೆಯದೇ ಆಕೆಯ ಹಣೆಗೆ ಕಿಸ್ ಕೊಟ್ಟಿದ್ದಾನೆ. ಈಶಾನ್ಯ ಬ್ರೆಜಿಲ್​​​ನ​​​​​ ಅಮರಂತೆಯಲ್ಲಿರುವ  ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ.

ಅಂಗಡಿಯ ಮಾಲೀಕ ಸಾಮುವೆಲ್ ಅಲ್ಮೀಡಿಯಾ ಹೇಳುವ ಪ್ರಕಾರ, ಸಂಜೆ 5 ಗಂಟೆ ವೇಳೆಗೆ ಮೆಡಿಕಲ್​​ಗೆ ನುಗ್ಗಿದ ಶಸ್ತ್ರಧಾರಿ ಕಳ್ಳರು ದರೋಡೆ ಮಾಡೋದಾಗಿ ಘೋಷಿಸಿದ್ರು. ಈ ವೇಳೆ ಅಂಗಡಿಯಲ್ಲಿ ಓರ್ವ ನೌಕರ ಮತ್ತು ಒಬ್ಬರು ವೃದ್ಧೆ ಮಾತ್ರ ಇದ್ದರು. ಈ ವೇಳೆ ನೌಕರನ ಬಳಿ ಮೆಡಿಕಲ್​ನಲ್ಲಿದ್ದ ಎಲ್ಲಾ ಹಣವನ್ನು ಕೊಡುವಂತೆ ಬೆದರಿಕೆ ಒಡ್ಡಿದ್ದಾರೆ.

ಈ ವೇಳೆ ಹೆದರಿದ ವೃದ್ಧ ಮಹಿಳೆಯೂ ತನ್ನಲ್ಲಿದ್ದ ಹಣವನ್ನು ನೀಡಲು ಮುಂದಾಗುತ್ತಾರೆ. ಆದ್ರೆ ಈ ವೇಳೆ ವೃದ್ಧೆಯ ಹಣೆಗೆ ಮುತ್ತಿಕ್ಕಿದ ದರೋಡೆಕೋರ, ನಮಗೆ ನಿಮ್ಮ ಹಣ ಬೇಡ ಅಂತ ಹೇಳಿದ್ದಾನೆ.

ಈ ದರೋಡೆಕೋರರು ಸುಮಾರು 1 ಸಾವಿರ ಡಾಲರ್ ನಗದು ಮತ್ತು ಒಂದಷ್ಟು ಅಂಗಡಿಯ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ ಅಂತ ತಿಳಿದುಬಂದಿದೆ. ಆದ್ರೆ ದರೋಡೆಕೋರ ಅಜ್ಜಿಯ ದುಡ್ಡು ಪಡೆಯಲು ನಿರಾಕರಿಸಿ, ಹಣೆಗೆ ಮುತ್ತುಕೊಟ್ಟ ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Contact Us for Advertisement

Leave a Reply