ಯಾರ್ ಬರ್ತೀರಿ ಬನ್ರೋ ನೋಡೋಣ…ರಸ್ತೆಯಲ್ಲೇ ಹುಲಿಗಳ ವಿಶ್ರಾಂತಿ..!!

masthmagaa.com:

ಮಧ್ಯಪ್ರದೇಶ: 4 ಹುಲಿಗಳು ನಡುರಸ್ತೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿರುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮಧ್ಯಪ್ರದೇಶದ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಹಳೆಯ ವಿಡಿಯೋ ಇದಾಗಿದ್ದು, ಇದನ್ನು ಐಎಫ್​ಎಸ್ ಅಧಿಕಾರಿ ರವೀಂದ್ರ ಮಣಿ ತ್ರಿಪಾಠಿ ಎಂಬುವವರು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ. 28 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಎರಡು ಹುಲಿಗಳು ರಸ್ತೆಯಲ್ಲಿ ಅಡ್ಡಾಡುತ್ತಿದ್ದರೆ, ಮತ್ತೆರಡು ಹುಲಿಗಳು ರಸ್ತೆ ಪಕ್ಕದಲ್ಲಿ ಕುಳಿತುಕೊಂಡಿವೆ. ಈ ದೃಶ್ಯ ಕಂಡು ಸಫಾರಿಗೆ ತೆರಳಿದ್ದ ಪ್ರವಾಸಿಗರೂ ಹೆದರಿದ್ದು, ಮಹಿಳೆಯೊಬ್ಬರು ಚಾಲಕನ ಬಳಿ ವಾಹನ ರಿವರ್ಸ್​ ತೆಗೆಯುವಂತೆ ಮನವಿ ಮಾಡುತ್ತಿರೋದನ್ನು ಕೂಡ ವಿಡಿಯೋದಲ್ಲಿ ಕೇಳಬಹುದು.

-masthmagaa.com

Contact Us for Advertisement

Leave a Reply