ಶಾಕಿಂಗ್‌ ವಿಡಿಯೋ.. 231 ಜನರಿದ್ದ ವಿಮಾನಕ್ಕೆ ಆಕಾಶದಲ್ಲೇ ಬೆಂಕಿ!

masthmagaa.com:

ಅಮೆರಿಕದ ಡೆನ್ವರ್​ನಿಂದ ಹೊನೊಲುಲುಗೆ ಹೊರಟಿದ್ದ ಯುನೈಟೆಡ್​ ಏರ್​ಲೈನ್ಸ್​ನ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗಲೇ ಅದರ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಭೀಕರ ಘಟನೆ ನಡೆದಿದೆ. ವಿಮಾನದಲ್ಲಿ 231 ಪ್ರಯಾಣಿಕರು ಮತ್ತು 10 ಮಂದಿ ಸಿಬ್ಬಂದಿ ಇದ್ದರು.

ಅದೃಷ್ಟವಶಾತ್ ವಿಮಾನವನ್ನ ಡೆನ್ವರ್​ ಇಂಟರ್​​ನ್ಯಾಷನಲ್​ ಸೇಫಾಗಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಅದರಲ್ಲಿದ್ದವರೆಲ್ಲರೂ ಸೇಫಾಗಿದ್ದಾರೆ. ಮತ್ತೊಂದು ವಿಚಾರ ಅಂದ್ರೆ ವಿಮಾನ ಗಾಳಿಯಲ್ಲಿರುವಾಗಲೇ ಅದರ ಕೆಲವೊಂದು ಅವಶೇಷಗಳು ಜನವಸತಿ ಪ್ರದೇಶ, ರಸ್ತೆ, ಮತ್ತು ಕ್ರೀಡಾಂಗಣದಲ್ಲಿ ಬಿದ್ದಿರೋದು ವರದಿಯಾಗಿದೆ.

-masthmagaa.com

Contact Us for Advertisement

Leave a Reply