ಉತ್ತರಾಖಂಡ ಟನಲ್‌ ದುರಂತ: ಸಿಲುಕಿಕೊಂಡಿರೋ ಕಾರ್ಮಿಕರೊಂದಿಗೆ ಮಾತನಾಡಿದ ಸಿಎಂ ಧಾಮಿ!

masthmagaa.com:

ಉತ್ತರಾಖಂಡದ ಟನಲ್‌ ದುರಂತದಲ್ಲಿ ಸಿಲುಕಿಕೊಂಡಿರೋ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ 12ನೇ ದಿನವೂ ಕಂಟಿನ್ಯೂ ಆಗಿದೆ. ಇದೀಗ ಕಾರ್ಮಿಕರ ರಕ್ಷಣೆಗೆ ಆಲ್ಮೋಸ್ಟ್‌ ಹತ್ತಿರವಾಗಿದ್ದು, ಇನ್ನು 14-15 ಗಂಟೆಗಳೊಳಗೆ ಅವ್ರ ರಕ್ಷಣೆ ಮಾಡಲಾಗುತ್ತೆ ಅಂತ ಹೇಳಲಾಗ್ತಿದೆ. ಉತ್ತರಾಖಂಡದ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವ್ರು, ವಾಕೀ ಟಾಕೀ ಮೂಲಕ ಟನಲ್‌ ಒಳಗೆ ಸಿಲುಕಿಕೊಂಡಿರೋ ಕಾರ್ಮಿಕರ ಜೊತೆ ಇಂದು ಮಾತುಕತೆ ನಡೆಸಿದ್ದಾರೆ. ʻನಾವೀಗ ಹೆಚ್ಚಂದ್ರೆ ಕೇವಲ 10 ಮೀಟರ್‌ ದೂರದಲ್ಲಿದ್ದೇವೆ. ನೀವೆಲ್ಲಾ ಒಮ್ಮೆ ಹೊರಗೆ ಬಂದ್ಮೇಲೆ ಎಲ್ಲಾ ರೀತಿಯ ಅರೆಂಜ್‌ಮೆಂಟ್ಸ್‌ ಮಾಡಲಾಗುತ್ತೆʼ ಅಂತ ಕಾರ್ಮಿಕರಿಗೆ ಭರವಸೆ ಕೊಟ್ಟಿದ್ದಾರೆ. ಜೊತೆಗೆ ಕಾರ್ಮಿಕರ ಆರೋಗ್ಯದ ಬಗ್ಗೆ ವಿಚಾರಿಸಿದ ಪುಷ್ಕರ್‌, ಕಾರ್ಮಿಕರಿಗೆ ಆರೋಗ್ಯವಾಗಿರಿ ಸೇಫಾಗಿರಿ ಅಂತ ಅಡ್ವೈಸ್‌ ಮಾಡಿದ್ದಾರೆ. ನಂತರ ಕಾರ್ಮಿಕರನ್ನ ಸೇಫಾಗಿ ಟನಲ್‌ನಿಂದ ಹೊರಗೆ ತರುತ್ತೇವೆ ಅಂತ ಮಾತು ಕೊಟ್ಟಿದ್ದಾರೆ. ಅಂದ್ಹಾಗೆ ಇದೀಗ ಡ್ರಿಲ್ಲಿಂಗ್‌ ಕಾರ್ಯ ಮುಂದುವರೆದಿದ್ದು, ಸದ್ಯ 45 ಮೀಟರ್‌ನಷ್ಟು ಪೈಪ್‌ಗಳನ್ನ ಅಳವಡಿಸಲಾಗಿದೆ. ಟನಲ್‌ ಒಳಗೆ ಸಿಲುಕಿಕೊಂಡಿರೋ ಕಾರ್ಮಿಕರ ಜೊತೆ, ರಕ್ಷಣಾ ಸಿಬ್ಬಂದಿಗೆ ಕೂಡ ಅಷ್ಟೇ ಪ್ರಮಾಣದಲ್ಲಿ ರಿಸ್ಕ್‌ ಇದೆ ಅಂತ ಹೇಳಲಾಗ್ತಿದೆ. ಸದ್ಯ ಕಾರ್ಮಿಕರಿಗಾಗಿ ಘಟನಾ ಸ್ಥಳದ ಹತ್ತಿರ 41 ಆಂಬ್ಯುಲೆನ್ಸ್‌ಗಳನ್ನ ನಿಯೋಜಿಸಲಾಗಿದೆ. ಜೊತೆಗೆ ಎಲ್ಲಿಯಾದ್ರೂ ಸೀರಿಯಸ್‌ ಕಂಡೀಷನ್‌ ಎದುರಾದಾಗ ಕಾರ್ಮಿಕರನ್ನ ಏರ್‌ಲಿಫ್ಟ್‌ ಮಾಡೋ ಫೆಸಿಲಿಟಿಯನ್ನ ಕೂಡ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ National Disaster Management Authority ಯ ಸದಸ್ಯರಾದ ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೇನ್ ಅವ್ರು ಮಾತನಾಡಿದ್ದಾರೆ. ʻದಾರಿಯಲ್ಲಿ ಯಾವ್ದೇ ಅಡೆತಡೆಗಳು ಬಾರದಿದ್ರೆ ಮತ್ತು ಆಗರ್‌ ಮೆಷೀನ್‌ ಪ್ರತೀ ಗಂಟೆಗೆ 4-5 ಮೀಟರ್‌ ಡ್ರಿಲ್ಲಿಂಗ್‌ ಸ್ಪೀಡ್‌ನಲ್ಲಿ ಕೆಲಸ ಮಾಡಿದ್ರೆ, ನಾಳೆ ಕಾರ್ಮಿಕರನ್ನ ರಕ್ಷಣೆ ಸಾಧ್ಯವಾಗಲಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply