ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ಮತ್ತೊಂದು ಭದ್ರತ್ಯಾ ವೈಫಲ್ಯ!

masthmagaa.com:

ಪ್ರಧಾನಿ ಮೋದಿ ಪಂಜಾಬ್​​​​ಗೆ ಭೇಟಿ ನೀಡಿದ್ದಾಗ ಭದ್ರತಾ ವೈಫಲ್ಯ ಸಂಭವಿಸಿದ ಎರಡು ದಿನಗಳ ಬಳಿಕ ವಿಡಿಯೋವೊಂದು ಹೊರಬಿದ್ದಿದೆ. ಇದ್ರಲ್ಲಿ ಮತ್ತೊಂದು ರೀತಿಯ ಭದ್ರತಾ ವೈಫಲ್ಯ ನಡೆದಿರೋದು ಬೆಳಕಿಗೆ ಬಂದಿದೆ. ಮೋದಿ ಫ್ಲೈ ಓವರ್​​ನಲ್ಲಿ ಸ್ಟ್ರಕ್ ಆಗಿದ್ದಾಗ ಪಕ್ಕದ ಮತ್ತೊಂದು ಫ್ಲೈಓವರ್​​ ಮೇಲೆ ಬಿಜೆಪಿ ಕಾರ್ಯಕತ್ರು ಬಂದಿದ್ದಾರೆ. ಕೆಲವೇ ಮೀಟರ್​​ನಷ್ಟು ದೂರದಲ್ಲಿ ನಿಂತು, ಬಿಜೆಪಿ ಬಾವುಟಗಳನ್ನು ಹಿಡಿದು ಪ್ರಧಾನಿ ಮೋದಿ, ಬಿಜೆಪಿ ಜಿಂದಾಬಾದ್ ಅಂತ ಘೋಷಣೆಗಳನ್ನು ಕೂಗಿದ್ದಾರೆ. ನಂತರ ಎಸ್​​ಪಿಜಿ ಗಾರ್ಡ್​​​ಗಳು ಪ್ರಧಾನಿ ಮೋದಿ ಇದ್ದ ಟೊಯೊಟಾ ಫಾರ್ಚುನರ್​​​ ಕಾರನ್ನು ಸುತ್ತುವರಿದು ಮುಂದೆ ಸಾಗೋದನ್ನು ಇಲ್ಲಿ ಗಮನಿಸಬಹುದಾಗಿದೆ. ಪ್ರಧಾನಿ ಮೋದಿ ಫಿರೋಜ್​ಪುರ್​​ನಲ್ಲಿ ಆಯೋಜಿಸಲಾಗಿದ್ದ ಸಮಾವೇಶಕ್ಕೆ ಹೊರಟಿದ್ರು. ಈ ಕಾರ್ಯಕರ್ತರು ಕೂಡ ಅದೇ ಸಮಾವೇಶಕ್ಕೆ ಹೊರಟಿದ್ರು. ಆದ್ರೆ ಟ್ರಾಫಿಕ್ ಜಾಮ್​ನಿಂದಾಗಿ ರಸ್ತೆ ಮಧ್ಯದಲ್ಲಿ ಸಿಲುಕಿದ್ರು. ಈ ವೇಳೆ ಪ್ರಧಾನಿ ಮೋದಿ ಹತ್ತಿರಕ್ಕೆ ಹೋಗಲು ಟ್ರೈ ಮಾಡಿದ್ರು ಅಂತ ಗೊತ್ತಾಗಿದೆ. ಇದು ಕೂಡ ಪಂಜಾಬ್ ಪೊಲೀಸರಿಂದ ಆಗಿರೋ ಮತ್ತೊಂದು ಭದ್ರತಾ ವೈಫಲ್ಯವೇ ಆಗಿದೆ. ಅಂದಹಾಗೆ ಅವತ್ತಿನ ಘಟನೆ ಸಂಬಂಧ ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳೆರಡೂ ಸಮಿತಿ ರಚಿಸಿ ತನಿಖೆಗೆ ಆದೇಶಿಸಿವೆ. ಪಂಜಾಬ್ ಸರ್ಕಾರ ಮತ್ತು ಪೊಲೀಸರು ಭದ್ರತೆಯ ಪ್ರೊಟೋಕಾಲ್ ಪಾಲಿಸಿರಲಿಲ್ಲ ಕೇಂದ್ರ ಸರ್ಕಾರ ವಾದಿಸ್ತಿದೆ. ಆದ್ರೆ ಪಂಜಾಬ್ ಸರ್ಕಾರ ಪ್ರಧಾನಿ ಮೋದಿ ಸಮಾವೇಶ ನಡೀಬೇಕಿದ್ದ ಜಾಗಕ್ಕೆ ಹೆಲಿಕಾಪ್ಟರ್​ನಲ್ಲಿ ಹೋಗ್ಬೇಕಿತ್ತು. ಆದ್ರೆ ಹವಾಮಾನ ಸರಿಯಿಲ್ಲವಾದ್ದರಿಂದ ರಸ್ತೆ ಮೂಲಕ ಪ್ರಯಾಣಿಸಲು ಕೊನೆ ಕ್ಷಣದಲ್ಲಿ ನಿರ್ಧರಿಸಲಾಯ್ತು. ಇದ್ರಲ್ಲಿ ನಮ್ಮದೇನೂ ತಪ್ಪಿಲ್ಲ ಅಂತ ಹೇಳ್ತಿದೆ.

-masthmagaa.com

Contact Us for Advertisement

Leave a Reply