ಛತ್ರಪತಿ ಶಿವಾಜಿ ಏರ್ಪೋರ್ಟ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ!

masthmagaa.com:

ಮುಂಬೈನ ಛತ್ರಪತಿ ಶಿವಾಜಿ ಇಂಟರ್ ನ್ಯಾಶನಲ್ ಏರ್ಪೋರ್ಟ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಒಂದು ಏರ್ ಆಂಬುಲೆನ್ಸ್ ವಿಮಾನ ಮಹರಾಷ್ಟ್ರದ ನಾಗ್ಪುರದಿಂದ ಟೇಕ್ ಆಫ್ ಆಗಿತ್ತು. ಇದು ಪಶ್ಚಿಮ ಬಂಗಾಳದ ಬಗ್ದೋಗ್ರಾ ತಲುಪಬೇಕಿತ್ತು.. ಅದರಲ್ಲಿ ಒಬ್ಬ ಕೊರೋನ ರೋಗಿ, ಒಬ್ಬ ಡಾಕ್ಟರ್, ಒಬ್ಬ ಸಂಬಂಧಿ ಹಾಗೂ ಇಬ್ಬರು ವಿಮಾನದ ಸಿಬ್ಬಂದಿ ಇದ್ರು. ಆದ್ರೆ ವಿಮಾನ ಟೇಕ್ ಆಫ್ ಆಗ್ತಿದ್ದಂತೆ ಅದರ ಮುಂದಿನ ಚಕ್ರ ಕಳಚಿಕೊಂಡು ಬಿದ್ದು ಹೋಯ್ತು. ವಿಮಾನ ಮೇಲೆ ಹಾರಿ ಆಗಿದೆ. ಚಕ್ರ ಬಿದ್ದೋಗಿದೆ. ಈಗೇನು ಮಾಡೋದು? ವಿಮಾನ ಲ್ಯಾಂಡಿಂಗ್ ಮಾಡೋದು ಹೇಗೆ? ಕೂಡಲೇ ಅಲರ್ಟ್ ಆದ ಪೈಲಟ್ ಬಗ್ದೋಗ್ರಾಗೆ ಹೋಗೋ ಬದಲಾಗಿ ಮುಂಬೈ ಏರ್ಪೋರ್ಟ್ನಲ್ಲೇ ಎಮರ್ಜೆನ್ಸಿ ಲ್ಯಾಂಡಿಗ್ಗೆ ಅವಕಾಶ ಕೇಳಿದ್ರು. ಬೆಲ್ಲಿ ಲ್ಯಾಂಡಿಗ್ ಮಾಡಲು ನಿರ್ಧರಿಸಲಾಯ್ತು. ಅಂದ್ರೆ ವಿಮಾನದ ಹೊಟ್ಟೆಯನ್ನ ನೆಲಕ್ಕೆ ಉಜ್ಜಿ ಲ್ಯಾಂಡ್ ಮಾಡೋ ಅತ್ಯಂತ ಅಪಾಯಕಾರಿ ವಿಧಾನ. ಇಲ್ಲಿ ಬೇರೆ ದಾರಿನೇ ಇರಲಿಲ್ಲ. ವಿಮಾನದ ಹಿಂದಿನ ಚಕ್ರಗಳು ನೆಲಕ್ಕೆ ಟಚ್ ಆದ ಬಳಿಕ ಕೆಲ ಕ್ಷಣಗಳಲ್ಲಿ ಮುಂದಿನ ಒಂದು ಚಕ್ರ ಟಚ್ ಆಗಬೇಕು. ಇಲ್ಲಿ ಚಕ್ರವೇ ಇಲ್ಲ. ಸೋ ವಿಮಾನದ ಹೊಟ್ಟೆಯನ್ನ ನೆಲಕ್ಕೆ ಉಜ್ಜಿಕೊಂಡೇ ಲ್ಯಾಂಡ್ ಆಗಬೇಕು. ಇದಕ್ಕಾಗಿ ಮುಂಬೈನ ಛತ್ರಪತಿ ಶಿವಾಜಿ ಇಂಟರ್ ನ್ಯಾಶನಲ್ ಏರ್ಪೋರ್ಟ್ನಲ್ಲಿ ತಯಾರಿ ಆರಂಭ ಆಯಿತು. ಈ ಕಠಿಣ ಆಪರೇಶನ್ಗೆ ರನ್ವೇ ನಂಬರ್ ಇಪ್ಪತ್ತೇಳನ್ನ ಫಿಕ್ಸ್ ಮಾಡಲಾಯ್ತು. ಇಡೀ ರನ್ವೇ ತುಂಬಾ ಫೋಮ್/ನೊರೆ ಸುರಿಯಲಾಯ್ತು. ನೆಲಕ್ಕೆ ಉಜ್ಜುವಾಗ ಘರ್ಷಣೆ ಜಾಸ್ತಿಯಾಗಿ ಬೆಂಕಿ ಹತ್ತಿಕೊಳ್ಳಬಾರದು ಅಂತ ಹೀಗೆ ಮಾಡಲಾಯ್ತು. ಜೆಟ್ ಸೆರ್ವ್ ಏವಿಯೇಶನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಈ ವಿಮಾನವನ್ನ ಕ್ಯಾಪ್ಟನ್ ಕೇಸರಿ ಸಿಂಗ್ ಅಂತ್ಯಂತ ನಾಜೂಕಿನಿಂದ ಬೆಲ್ಲಿ ಲ್ಯಾಂಡಿಂಗ್ ಮಾಡಿದ್ರು. ಯಶಸ್ವಿಯಾಗಿ ಮಾಡಿದ್ರು. ಕೆಲ ಸಲ ಬೆಂಕಿಯ ಕಿಡಿ ಏಳ್ತಾದ್ರೂ ಅನಾಹುತ ಆಗಲಿಲ್ಲ. ಒಳಗಿದ್ದ ಅಷ್ಟೂ ಜನ ಸೇಫ್ ಆಗಿ ಹೊರಗೆ ಬಂದ್ರು.
ಈ ಘಟನೆ ಇನ್ನೊಂದು ವಿಚಾರವನ್ನೂ ಹೇಳುತ್ತೆ. ಈ ದೇಶದಲ್ಲಿ ಒಂದು ಕಡೆ ಆಂಬುಲೆನ್ಸ್ ಸಿಗದೆ ನಡೆದುಕೊಂಡೇ ಆಸ್ಪತ್ರೆಗೆ ಹೋಗೋಕೆ ಪ್ರಯತ್ನಪಟ್ಟು ದಾರಿಯಲ್ಲೇ ಬಿದ್ದು ಪ್ರಾಣ ಕಳೆದುಕೊಳ್ಳೋರೂ ಇದಾರೆ. ಏರ್ ಆಂಬುಲೆನ್ಸ್ ಬುಕ್ ಮಾಡಿಕೊಂಡು ಡಾಕ್ಟರ್ ಸಮೇತ ವಾಯುಮಾರ್ಗದಲ್ಲಿ ಕ್ವಿಕ್ ಆಗಿ ತಲುಪೋರೂ ಇದಾರೆ!

-masthmagaa.com

Contact Us for Advertisement

Leave a Reply