ಬ್ಲಾಕ್​ ಫಂಗಸ್​​ನ್ನು ಮಹಾಮಾರಿ ಅಂತ ಘೋಷಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

masthmagaa.com:

ದೇಶದಲ್ಲಿ ಕೊರೊನಾ 2ನೇ ಅಲೆ ಸಾವಿನ ಅಲೆಯಾಗಿ ಪರಿಣಮಿಸಿರೋ ನಡುವೆಯೇ ಕರಿಫಂಗಸ್ ಹಾವಳಿ ಕೂಡ ಜಾಸ್ತಿಯಾಗಿದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ತಾ ಇದೆ. ಈ ನಡುವೆ ಮ್ಯೂಕೋರ್​ಮೈಕೋಸಿಸ್​ ಅಥವಾ ಬ್ಲಾಕ್​​ಫಂಗಸ್​​ನ್ನು ಮಹಾಮಾರಿ ಎಂದು ಘೋಷಿಸುವಂತೆ, ಎಪಿಡೆಮಿಕ್ ಡಿಸೀಸ್​ ಆಕ್ಟ್​ ಅಡಿಯಲ್ಲಿ ಸೇರಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಅಂದ್ರೆ ಇನ್ಮುಂದೆ ದೇಶದ ಯಾವುದೇ ರಾಜ್ಯದಲ್ಲಿ ಬ್ಲಾಕ್​ಫಂಗಸ್ ಪ್ರಕರಣ ಪತ್ತೆಯಾದ್ರೂ ಕೇಂದ್ರ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತೆ. ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ರಾಜ್ಯಗಳಿಗೆ ಬರೆದಿರೋ ಪತ್ರದಲ್ಲಿ​​, ಕೊರೋನಾ ಬಂದಿರೋ ಪೇಶೆಂಟ್​​ಗಳಲ್ಲಿ ಅದರಲ್ಲೂ ಸ್ಟಿರಾಯ್ಡ್ ಥೆರಪಿ ಪಡೆದೋರು ಮತ್ತು ಮಧುಮೇಹಿ ಪೇಶೆಂಟ್​​​ಗಳಲ್ಲಿ ಈ ಬ್ಲಾಕ್​ಫಂಗಸ್ ಜಾಸ್ತಿ ಪತ್ತೆಯಾಗ್ತಿದೆ. ಇದು ದೀರ್ಘಕಾಲದ ಕಾಯಿಲೆ ಮತ್ತು ಸಾವುನೋವಿಗೂ ಕಾರಣವಾಗಿದೆ. ಹೀಗಾಗಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳು ಬ್ಲಾಕ್​​ಫಂಗಸ್​​ ಸ್ಕ್ರೀನಿಂಗ್​, ಡಯಾಗ್ನಿಸಿಸ್​ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಪಾಲಿಸಬೇಕು ಅಂತ ತಿಳಿಸಲಾಗಿದೆ. ರಾಜಸ್ಥಾನ ಮತ್ತು ತೆಲಂಗಾಣ ಈಗಾಗಲೇ ಬ್ಲಾಕ್​ ಫಂಗಸ್​​ನ್ನು ಮಹಾಮಾರಿ ಅಂತ ಘೋಷಿಸಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದ್ರೆ 1500 ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 90 ಮಂದಿ ಜೀವ ಕೂಡ ಬಿಟ್ಟಿದ್ದಾರೆ.

-masthmagaa.com

Contact Us for Advertisement

Leave a Reply