ಗುಂಡಗಿರುವ ಭೂಮಿಯಿಂದ ಸಮುದ್ರದ ನೀರು ಕೆಳಕ್ಕೆ ಚೆಲ್ಲುವುದಿಲ್ಲ ಯಾಕೆ?

ಭೂಮಿ ಗುಂಡಗಿದೆ ಅಂತ ನಿಮಗೆ ಗೊತ್ತು. ಸುತ್ತಲಿರುವ ಆಕಾಶದ ಮಧ್ಯ ಭೂಮಿ ತೇಲುತಿದೆ ಅನ್ನೋದು ಕೂಡ ನಿಮಗೆ ಗೊತ್ತು. ಆದರೆ ಭೂಮಿಯಿಂದ ನೀರು ಯಾಕೆ ಕೆಳಗೆ ಬೀಳುವುದಿಲ್ಲ ಗೊತ್ತಾ.? ನಮ್ಮನ್ನು ಸೇರಿದಂತೆ ಭೂಮಿಯ ಮೇಲಿರುವ ಅಪಾರ ಪ್ರಮಾಣದ ನೀರು ಯಾವತ್ತೂ ಕೆಳಕ್ಕೆ ಚೆಲ್ಲೋದಿಲ್ಲ ಯಾಕೆ ಗೊತ್ತಾ? ಈ ಇಂಟರೆಸ್ಟಿಂಗ್ ವಿಜ್ಞಾನದ ಮಾಹಿತಿಯನ್ನು ಮಾಹಿತಿಯನ್ನು ಡೀಟೇಲಾಗಿ ಹೇಳಿದ್ದೀವಿ..ಫುಲ್ ಓದಿ..

ನೀರು ಕೆಳಕ್ಕೆ ಚೆಲ್ಲುವುದಿಲ್ಲ ಯಾಕೆ ಅಂತ ತಿಳಿದುಕೊಳ್ಳುವ ಮೊದಲು. ಕೆಳಗೆ ಅಂದ್ರೆ ಏನು ಅಂತ ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮನ್ನ ಕೇಳಿದರೆ ನೀವು ಹೀಗೆ ಹೇಳುತ್ತೀರಿ. ಮೇಲೆ ಅಂದ್ರೆ ಆಕಾಶದ ಕಡೆ ಕೈ ತೋರಿಸುತ್ತೀರಿ. ಕೆಳಗೆ ಅಂದರೆ ಭೂಮಿ ಕಡೆ ಕೈ ತೋರಿಸುತ್ತೀರಿ. ಉತ್ತರ ಸಿಂಪಲ್… ನಿಮ್ಮ ರೀತಿ ಭೂಮಿಯ ಯಾವುದೇ ಭಾಗದಲ್ಲಿ ನಿಂತ ವ್ಯಕ್ತಿಗೆ ಕೇಳಿದರೂ ಇದೇ ಉತ್ತರವನ್ನು ಕೊಡುತ್ತಾನೆ. ಅಂದರೆ ಭೂಮಿಯ ಯಾವುದೇ ಭಾಗದಲ್ಲಿ ನಿಂತರೂ ಮೇಲೆ ಅಂದ್ರೆ ಅದು ಆಕಾಶ ಮತ್ತು ಕೆಳಗೆ ಎಂದ್ರೆ ಅದು ಭೂಮಿಯ ಕಡೆಗೆ ಅಂತ ಅರ್ಥ. ಆದ್ರೆ ಖಾಲಿ ಆಕಾಶದಲ್ಲಿ ಭೂಮಿ ತೇಲುತ್ತಿದ್ದರೂ ನೀರು ಯಾಕೆ ಕೆಳಗೆ ಚೆಲ್ಲೋದಿಲ್ಲ ಗುರೂ..? ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬರಬಹುದು.

ಭೂಮಿಯ ಗ್ರಾವಿಟಿ ಅಥವಾ ಗುರುತ್ವಾಕರ್ಷಣ ಬಲ..!
ಈ ವರದಿಯ ಆರಂಭದಲ್ಲಿ ಮೇಲೆ ಯಾವುದು ಕೆಳಗೆ ಯಾವುದು ಅಂತ ನೀವು ತಿಳಿದುಕೊಂಡರೆ. ಈಗ ಯಾಕೆ ಎಲ್ಲವೂ ಕೆಳಗೆ ಎಳೆಯಲ್ಪಡುತ್ತದೆ ಅಂತ ತಿಳಿದುಕೊಳ್ಳಬೇಕು. ಭೂಮಿಯ ಗುರುತ್ವಾಕರ್ಷಣ ಬಲ ಪ್ರತಿಯೊಂದನ್ನು ತನ್ನತ್ತ ಸೆಳೆಯುತ್ತದೆ. ಅದೇ ರೀತಿ ಭೂಮಿಯ ವಾತಾವರಣದಲ್ಲಿ ಉಂಟಾಗುವ ಮಳೆಯಿಂದ ಭೂಮಿ ಮೇಲೆ ಬಿದ್ದ ನೀರು ಭೂಮಿಯಲ್ಲೇ ನಿಂತುಕೊಳ್ಳುತ್ತದೆ. ಭೂಮಿ ಮೇಲಿನ ತಗ್ಗು ಜಾಗಗಳಲ್ಲಿ ಹೋಗಿ ನೀರು ಸಂಗ್ರಹವಾಗುತ್ತದೆ. ಇದೇ ಕಾರಣಕ್ಕೆ ಭೂಮಿ ಮೇಲೆ ಹಳ್ಳಕೊಳ್ಳ, ನದಿ, ಸರೋವರ, ಕೆರೆ ಸಮುದ್ರಗಳು ನಿರ್ಮಾಣವಾಗಿರೋದು.

ಇಲ್ಲಿ ಇನ್ನೊಂದು ಅತ್ಯಂತ ಕುತೂಹಲಕರ ವಿಜ್ಞಾನದ ಮಾಹಿತಿ ಇದೆ. ಭೂಮಿ ರೀತಿ ಎಲ್ಲಾ ಗ್ರಹಗಳಿಗೂ ಅದರದ್ದೇ ಆದ ಗುರುತ್ವಾಕರ್ಷಣ ಬಲ ಇರುತ್ತದೆ. ಭೂಮಿಗಿಂತ ದೊಡ್ಡ ಗ್ರಹಗಳಿಗೆ ಭೂಮಿಗಿಂತಲೂ ಹೆಚ್ಚಿನ ಗುರುತ್ವಾಕರ್ಷಣ ಬಲ ಇರುತ್ತದೆ. ಉದಾಹರಣೆಗೆ ಗುರುಗ್ರಹ. ಭೂಮಿಗಿಂತ ಹಲವು ಪಟ್ಟು ಹೆಚ್ಚಿನ ಗುರುತ್ವಾಕರ್ಷಣ ಬಲ ಈ ಗ್ರಹಕ್ಕೆ ಇದೆ. ಆದ್ರೆ ಗುರುಗ್ರಹ ಭೂಮಿಗಿಂತ ಬಹಳ ದೂರ ಇರುವುದರಿಂದ ಆದರ ಗುರುತ್ವಾಕರ್ಷಣ ಬಲ ನಮ್ಮ ಮೇಲೆ ಪರಿಣಾಮ ಬೀರುತ್ತಿಲ್ಲ. ಒಂದು ವೇಳೆ ಗುರು ಗ್ರಹ ಭೂಮಿಗೆ ತುಂಬಾ ಹತ್ತಿರದಲ್ಲಿ ಇದ್ದಿದ್ದರೆ, ಭೂಮಿಯನ್ನು ತನ್ನತ್ತ ಎಳೆದುಕೊಂಡು ಬಿಡುತ್ತಿತ್ತೇನೋ. ಅಥವಾ ಭೂಮಿಯ ಸಮುದ್ರದ ನೀರೆಲ್ಲ ಕಳಚಿಕೊಂಡು ಸೀದಾ ಬಾಹ್ಯಾಕಾಶಕ್ಕೆ ಚೆಲ್ಲಿ ಬಿಡುತ್ತಿತ್ತೇನೋ.

ಚಂದಿರ ಹತ್ತಿರ ಇದ್ದಾನಲ್ಲ?
ಹೌದು ಚಂದಿರ ಹತ್ತಿರ ಇದ್ದಾನೆ. ಚಂದ್ರನ ಗುರುತ್ವಾಕರ್ಷಣೆಯ ಪರಿಣಾಮ ನಮ್ಮ ಮೇಲೆ ಕಂಡಿತ ಆಗುತ್ತಿದೆ. ಆದರೆ ಚಂದ್ರ ಭೂಮಿಗಿಂತ ಹಲವು ಪಟ್ಟು ಸಣ್ಣ ಇರೋದರಿಂದ ಗಂಭೀರ ಪ್ರಮಾಣದಲ್ಲಿ ಸಮಸ್ಯೆ ಆಗುತ್ತಿಲ್ಲ. ಆದರೆ ಸಣ್ಣ ಮಟ್ಟಿಗಿನ ಸೆಳೆತವಂತೂ ಭೂಮಿ ಮೇಲೆ ಚಂದ್ರನ ಗುರುತ್ವಾಕರ್ಷಣ ಬಲದಿಂದ ಆಗುತ್ತಲೇ ಇದೆ. ಚಂದ್ರ ಭೂಮಿಯ ಸುತ್ತ ಸುತ್ತುವಾಗ, ಅಂಡಾಕಾರದಲ್ಲಿ ಸುತ್ತುತ್ತಾನೆ. ಆಗ ಕೆಲವು ಸಲ ಭೂಮಿಯ ಹತ್ತಿರಕ್ಕೂ, ಕೆಲವು ಸಲ ಭೂಮಿಯಿಂದ ಅತಿ ದೂರಕ್ಕೂ ಹೋಗುತ್ತಾನೆ. ಯಾವಾಗೆಲ್ಲಾ ಚಂದ್ರ ಭೂಮಿಗೆ ಹತ್ತಿರದಿಂದ ಪಾಸ್ ಆಗುತ್ತಾನೋ ಆಗೆಲ್ಲಾ ಭೂಮಿಯಲ್ಲಿ ಸಮುದ್ರದ ಮೇಲೆ ದೊಡ್ಡ ದೊಡ್ಡ ಅಲೆಗಳು ಉತ್ಪತ್ತಿಯಾಗುತ್ತವೆ. ಚಂದ್ರನ ಗುರುತ್ವಾಕರ್ಷಣೆಗೆ ಸಿಲುಕಿ ಸಮುದ್ರದಲ್ಲಿ ನೀರು ಹುಚ್ಚೇಳುತ್ತದೆ. ಇದೇ ಕಾರಣಕ್ಕೆ ಪೂರ್ಣ ಹುಣ್ಣಿಮೆ ಇದ್ದಾಗಲೆಲ್ಲ ಸಮುದ್ರದಲ್ಲಿ ದೈತ್ಯ ಅಲೆಗಳು ಸೃಷ್ಟಿಯಾಗೋದು.

ಇದು ನಮ್ಮ ಭೂಮಿ ಮೇಲಿನ ನೀರು ಚೆಲ್ಲದಂತೆ ನಿಂತಿರುವುದು ಹೇಗೆ ಅಂತ ನಿಮಗೆ ತಿಳಿಸಿಕೊಡುವ ಪ್ರಯತ್ನ. ನಮ್ಮ ಈ ಪ್ರಯತ್ನದಿಂದ ನಿಮಗೆ ಒಂದಷ್ಟು ಹೊಸ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗಿದೆ ಅಂತ ಭಾವಿಸುತ್ತೇವೆ. ಸೋ ನಿಮಗೆ ಇದು ಇಷ್ಟ ಆಗಿದ್ದರೆ ಎಲ್ಲರಿಗೂ ಶೇರ್ ಮಾಡಿ.

Contact Us for Advertisement

Leave a Reply