ಬೆಂಗಳೂರು-ಮೈಸೂರು ಹೆದ್ದಾರಿಗೆ ಜಲಕಂಟಕ! ಸರ್ಕಾರದ ವಿರುದ್ದ ಜನರ ಆಕ್ರೋಶ!

masthmagaa.com:

ರಾಮನಗರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಮಳೆ ಸುರಿದಿದೆ. ಇದರಿಂದ ಕೆಲ ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಳೆ ನೀರು ನಿಂತು ಜನ ಪರದಾಡುವಂತೆ ಆಗಿದೆ. ಮಳೆಯ ನೀರಿನಿಂದ ಕಾರ್‌ ಒಂದು ಕೆಟ್ಟು ನಿಂತಿದ್ದು, ಹಿಂದೆ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ಬೆನ್ನಲ್ಲೇ ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ. ಇಷ್ಟು ಸಣ್ಣ ಮಳೆಗೆ ಹೆದ್ದಾರಿಯ ಸ್ಥಿತಿ ಹೀಗಾದರೆ ಮಳೆಗಾಲದಲ್ಲಿ ಇನ್ನೇನು ಗತಿ, ಅಧಿಕಾರಿಗಳು ಮಳೆ ನೀರು ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕು ಅಂತ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ವಾಹನ ಸವಾರರ ಆಕ್ರೋಶದ ಬಳಿಕ ಎಚ್ಚೆತ್ತ ಅಧಿಕಾರಿಗಳು ಸರ್ವೀಸ್ ರಸ್ತೆ ಪಕ್ಕದಲ್ಲಿ ಡ್ರೈನೇಜ್ ಮಾಡಿ ನೀರನ್ನು ಹೊರ ಹಾಕಲು ಯತ್ನಿಸಿದ್ದಾರೆ. ಎಂದಿನಂತೆ ಈ ಹೆದ್ದಾರಿ ಜಗಳ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹೆದ್ದಾರಿ ಕ್ರೆಡಿಟ್‌ ತೆಗೆದುಕೊಳ್ತಿರೊ ಪುಣ್ಯಾತ್ಮರೆಲ್ಲ ಹೆದ್ದಾರಿ ಜಲಾವೃತಗೊಂಡಿರೊ ಬಗ್ಗೆ ಮಾತನಾಡಬೇಕು. ಪ್ರಯಾಣಿಕರ ಜೀವವನ್ನ ಬಿಜೆಪಿಯ 40% ವ್ಯವಹಾರ ಪಣಕ್ಕಿಟ್ಟಿದೆ ಅಂತ ಡಿಕೆ ಶಿವಕುಮಾರ್‌ ಟೀಕಿಸಿದ್ದಾರೆ. ಇತ್ತ ಇದಕ್ಕೆ ಸ್ಪಷ್ಟನೆ ಕೊಟ್ಟಿರೋ ಸಿಎಂ ಬೊಮ್ಮಾಯಿ, ಮಳೆ ಬಂದಾಗ ಸಣ್ಣ ಪುಟ್ಟ ಸಮಸ್ಯೆ ಆಗೋದು ಸಹಜ. ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತು ಉಂಟಾಗಿರೋ ಸಮಸ್ಯೆಯನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಸರಿ ಮಾಡಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply