ಪ್ರಧಾನಿ ವಿರುದ್ಧ ಟೀಕೆ ಮಾಡಿದ್ದಕ್ಕೆ ದಂಡ ಹಾಕಿದ್ದನ್ನ ದೇಣಿಗೆ ಮೂಲಕ ಸಂಗ್ರಹಿಸಿ ಸೈ ಎನಿಸಿಕೊಂಡ

masthmagaa.com:

ಸಿಂಗಾಪುರ್​ನಲ್ಲಿ ಒಂದು ಇಂಟರೆಸ್ಟಿಂಗ್ ಘಟನೆ ನಡೆದಿದೆ. ಏನಾಗಿದೆ ಅಂದ್ರೆ, ಸಿಂಗಾಪುರ್​ ಪ್ರಧಾನಿ ಲೀ ಸೆನ್​ ಲೂಂಗ್ ಅಕ್ರಮ ಹಣ ವರ್ಗಾಣೆ ಮಾಡಿದ್ದಾರೆ ಅನ್ನೋದಕ್ಕೆ ಸಂಬಂಧಪಟ್ಟ ಆರ್ಟಿಕಲ್ ಒಂದನ್ನ ಸಿಂಗಾಪುರ್​ನ ಬ್ಲಾಗರ್ ಒಬ್ಬ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಆತನ ವಿರುದ್ಧ ಸಿಂಗಾಪುರ್ ಪ್ರಧಾನಿ ಬರೋಬ್ಬರಿ 1 ಲಕ್ಷದ 33 ಸಾವಿರ ಸಿಂಗಾಪುರ್ ಡಾಲರ್​ ಮಾನಹಾನಿ ಕೇಸ್ ಹಾಕಿದ್ರು. ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 72 ಲಕ್ಷ ಅನ್ಕೋಬೋದು. ಕೋರ್ಟ್​ ಕೂಡ ಸಿಂಗಾಪುರ್​ ಪ್ರಧಾನಿ ಪರವಾಗಿಯೇ ತೀರ್ಪು ಕೊಡ್ತು. ಅಂದ್ರೆ ಆ ಬ್ಲಾಗರ್ ಅಷ್ಟು ದುಡ್ಡನ್ನ ಪ್ರಧಾನಿಗೆ ಕೊಡ್ಬೇಕು ಅಂತ ಹೇಳ್ತು. ಇಷ್ಟು ದುಡ್ಡು ಹೇಗಪ್ಪಾ ಒಟ್ಟು ಮಾಡಿ ಕೊಡೋದು ಅಂತ ಆತ ಯೋಚ್ನೆ ಮಾಡಿ, ಆನ್​ಲೈನ್ ಫಂಡ್​ರೈಸಿಂಗ್ ಅಭಿಯಾನವನ್ನ ಶುರು ಮಾಡ್ದ. ಇದಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿ ಕೇವಲ 11 ದಿನಗಳಲ್ಲಿ 1 ಲಕ್ಷದ 33 ಸಾವಿರ ಸಿಂಗಾಪುರ್ ಡಾಲರ್​ ಹಣವನ್ನ ಸಂಗ್ರಹಿಸಿದ್ದಾನೆ. ಬಳಿಕ ‘We hit 133k, thanks to all Singaporeans’ ಅಂತ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾನೆ. ಅಂದ್ರೆ ಅಷ್ಟು ದುಡ್ಡು ಕಲೆಕ್ಟ್, ಆಯ್ತು.. ಸಿಂಗಾಪುರ್​ನ ಜನತೆಗೆ ಧನ್ಯವಾದ ಅಂತ ಹೇಳಿದ್ದಾನೆ. ಇದರಿಂದ ಒಂದ್​ರೀತಿ ಸಿಂಗಾಪುರ್ ಸರ್ಕಾರಕ್ಕೆ ಮುಜುಗರ ಆದಂತಾಗಿದೆ.

-masthmagaa.com

Contact Us for Advertisement

Leave a Reply