ಇಮ್ರಾನ್ ಖಾನ್ ಭೂಗೋಳ ಜ್ಞಾನ ಬಯಲು: ಫುಲ್ ಟ್ರೋಲ್ ಆಗ್ತಿದ್ದಾರೆ ಪಾಕ್ ಪಿಎಂ!

masthmagaa.com:

ವಿಶ್ವದ ಯಾವುದೇ ರಾಷ್ಟ್ರದಲ್ಲಿ ಮುಸ್ಲಿಮರ ವಿಚಾರವಾಗಿ ಏನೇ ವಿವಾದವಾದ್ರೂ ಮೂಗು ತೋರಿಸೋ ಪಾಕಿಸ್ತಾನ, ಉಘರ್ ಮುಸ್ಲಿಮರ ವಿಚಾರದಲ್ಲಿ ತುಟಿ ಪಿಟಿಕ್ ಅಂತಿಲ್ಲ. ಇದೀಗ ಸಂದರ್ಶನವೊಂದ್ರಲ್ಲಿ ಸರಿಯಾಗೇ ತಗ್ಲಾಕ್ಕೊಂಡಿದ್ದಾರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್. ಮೊದಲಿಗೆ ಪಾಶ್ಚಿಮಾತ್ಯ ದೇಶಗಳ ಬಗ್ಗೆ ಮಾತನಾಡಿದ ಇಮ್ರಾನ್ ಖಾನ್, ಅಮೆರಿಕದಲ್ಲಿ 2001ರ ಸೆಪ್ಟೆಂಬರ್​​​​​​​​​​​​​​ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಇಸ್ಲಾಮಿಕ್ ಭಯೋತ್ಪಾದನೆ ಅನ್ನೋ ಶಬ್ದ ಬಂತು. ನಂತರದಲ್ಲಿ ಇಡೀ ವಿಶ್ವದಲ್ಲಿ ಎಲ್ಲೇ ಭಯೋತ್ಪಾದಕ ದಾಳಿ ನಡೆದ್ರೂ ಮುಸ್ಲಿಂ ಸಮುದಾಯವನ್ನೇ ಹೊಣೆಗಾರರನ್ನಾಗಿ ಮಾಡೋಕೆ ಶುರು ಮಾಡಲಾಯ್ತು ಅಂದ್ರು. ಇದೇ ವೇಳೆ ಚೀನಾದ ಶಿಂಜಿಯಾಂಗ್ ಪ್ರಾಂತ್ಯದಲ್ಲಿ ಉಘರ್ ಮುಸ್ಲಿಮರ ವಿರುದ್ಧ ನಡೀತಿರೋ ಹಿಂಸಾಚಾರದ ಬಗ್ಗೆ ಪ್ರಶ್ನೆ ಕೇಳಿದಾಗ, ಈ ಬಗ್ಗೆ ನಾವು ಚೀನಾದ ಜೊತೆಗೆ ಮುಚ್ಚಿದ ಕೋಣೆಯಲ್ಲಿ ಮಾತನಾಡ್ತಿದ್ದೀವಿ.. ಚೀನಾ ನಾವು ತುಂಬಾ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಗೆಳೆಯ ಅಂತ ಹೇಳಿದ್ದಾರೆ. ಇನ್ನು ಇದೇ ಇಂಟರ್​​ವ್ಯೂನಲ್ಲಿ ಇಮ್ರಾನ್ ಖಾನ್ ಭೂಗೋಳ ಜ್ಞಾನ ಕೂಡ ಬಹಿರಂಗವಾಗಿದ್ದು, ಜನ ಫುಲ್ ಟ್ರೋಲ್ ಮಾಡ್ತಿದ್ದಾರೆ. ಉಘರ್ ಮುಸ್ಲಿಮರ ಬಗ್ಗೆ ಮಾತನಾಡುತ್ತಲೇ ಟಾಪಿಕ್ ಚೇಂಜ್ ಮಾಡಿದ ಇಮ್ರಾನ್ ಖಾನ್, ಕಾಶ್ಮೀರದ ಬಗ್ಗೆ ಮಾತನಾಡೋಕೆ ಶುರು ಮಾಡಿದ್ದಾರೆ. ಪಾಶ್ಮಿಮಾತ್ಯ ದೇಶಗಳು ಕಾಶ್ಮೀರದಲ್ಲಾಗ್ತಿರೋ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಬಾಯಿ ಮುಚ್ಕೊಂಡಿವೆ. ಕಾಶ್ಮೀರ ನಮ್ಮ ಗಡಿಹಂಚಿಕೊಂಡಿದೆ. ಹೀಗಾಗಿ ನಮಗೆ ಅಲ್ಲಿನ ಜನರ ಬಗ್ಗೆ ಚಿಂತೆ ಇದೆ ಅಂತ ಹೇಳಿದ್ದಾರೆ. ಆದ್ರೆ ಚೀನಾದ ಶಿಂಜಿಯಾಂಗ್ ಕೂಡ ಸದ್ಯ ಪಾಕಿಸ್ತಾನದ ವಶದಲ್ಲಿರೋ ಪಾಕ್ ಆಕ್ರಮಿತ ಕಾಶ್ಮೀರದ ಗಡಿಯನ್ನೇ ಹಂಚಿಕೊಂಡಿದೆ ಅನ್ನೋದು ಅವರಿಗೆ ಗೊತ್ತಿಲ್ಲ ಅನ್ಸುತ್ತೆ. ಮತ್ತೊಂದ್ಕಡೆ ಪಾಕಿಸ್ತಾನದ ಮತ್ತೊಂದು ತುದಿಯಲ್ಲಿರೋ ಅಫ್ಘಾನಿಸ್ತಾನದ ನಡುವಿನ ಗಡಿಯಲ್ಲಿ ಫೆನ್ಸಿಂಗ್​ ಬೇಲಿ ನಿರ್ಮಾಣ ಮಾಡ್ತಿದೆ. ಈಗಾಗಲೇ 88 ಪರ್ಸೆಂಟ್ ಬೇಲಿ ನಿರ್ಮಾಣ ಕಾರ್ಯ ಮುಗಿದಿದ್ದು, ಜೂನ್ 30ರ ವೇಳೆಗೆ ಬೇಲಿ ನಿರ್ಮಾಣ ಕಾರ್ಯ ಫಿನಿಶ್ ಆಗುತ್ತೆ ಅಂತ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ. ಅಂದ್ರೆ ಒಟ್ಟಾರೆಯಾಗಿ ಪಾಕಿಸ್ತಾನಕ್ಕೆ ಗಡಿ ಹಂಚಿಕೊಂಡಿರೋ ಅಫ್ಘಾನಿಸ್ತಾನದಲ್ಲಿರೋ ಮುಸ್ಲಿಮರ ಬಗ್ಗೆ ಚಿಂತೆ ಇಲ್ಲ..ತನ್ನ ವಶದಲ್ಲಿರೋ ಪಾಕ್ ಆಕ್ರಮಿತ ಕಾಶ್ಮೀರದ ಜೊತೆಗೆ ಗಡಿ ಹಂಚಿಕೊಂಡಿರೋ ಶಿಂಜಿಯಾಂಗ್ ಪ್ರಾಂತ್ಯದ ಮುಸ್ಲಿಮರ ಬಗ್ಗೆನೂ ಚಿಂತೆ ಇಲ್ಲ. ಆದ್ರೆ ಕಾಶ್ಮೀರದ ಮುಸ್ಲಿಮರ ಬಗ್ಗೆ ಚಿಂತೆ ಇದೆ. ಯಾಕೆ ಅಂತ ಕೇಳಿದ್ರೆ ಗಡಿ ಹಂಚಿಕೊಂಡಿದ್ದಾರಂತೆ ಅದಕ್ಕಂತೆ.. ಏನ್ ಮಾತಾಡ್ತಾರೋ…

-masthmagaa.com

Contact Us for Advertisement

Leave a Reply