ಅಮೆರಿಕ ಪ್ರಜಾಪ್ರಭುತ್ವ ಶಂಗಸಭೆಗೆ ಚೀನಾ ಕೆಂಡಾಮಂಡಲ!

masthmagaa.com:
ನಿನ್ನೆ ಮತ್ತು ಮೊನ್ನೆ ಎರಡೆರಡು ದಿನ ಅಮೆರಿಕ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಶೃಂಗಸಭೆ ನಡೆದಿದೆ. ಆದ್ರೆ ಈ ಸಭೆಗೆ ಚೀನಾ, ರಷ್ಯಾ, ಹಂಗೇರಿ ಸೇರಿದಂಗೆ ಹಲವು ದೇಶಗಳಿಗೆ ಆಹ್ವಾನ ನೀಡಿಲ್ಲ. ಇದ್ರಿಂದ ಚೀನಾ ಫುಲ್ ಉರಿದು ಕೆಂಡಾಮಂಡಲವಾಗಿದೆ. ವಿಡಿಯೋ ಲಿಂಕ್ ಮೂಲಕ ನಡೆದ ಈ ಶೃಂಗಸಭೆ ಕುರಿತು ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ, ಪ್ರಜಾಪ್ರಭುತ್ವ ಅನ್ನೋದು ಬೇರೆ ದೇಶಗಳಲ್ಲಿ ಹಸ್ತಕ್ಷೇಪ ಮಾಡಲು ಅಮೆರಿಕ ಬಳಸೋ ವಿನಾಶಕಾರಿ ಆಯುಧ. ದೇಶಗಳನ್ನು ಸೈದ್ಧಾಂತಿಕವಾಗಿ ವಿಭಜಿಸಲು, ಮತ್ತು ಶಸ್ತ್ರಸಜ್ಜಿತಗೊಳಿಸಲು, ವಿಭಜನೆ ಮತ್ತು ಸಂಘರ್ಷವನ್ನು ಪ್ರಚೋದಿಸಲು ಅಮೆರಿಕ ಈ ಶೃಂಗಸಭೆಯನ್ನು ಆಯೋಜಿಸಿದೆ ಅಂತ ಕಿಡಿಕಾರಿದೆ. ಅಲ್ಲದೆ ಅಮೆರಿಕದ ಪ್ರಜಾಪ್ರಭುತ್ವ ಭ್ರಷ್ಟ ಮತ್ತು ವೈಫಲ್ಯದಿಂದ ಕೂಡಿದ್ದಾಗಿದೆ. ಹೀಗಾಗಿ ಚೀನಾ ಎಲ್ಲಾ ರೀತಿಯ ಸುಳ್ಳು ಪ್ರಜಾಪ್ರಭುತ್ವವನ್ನು ದೃಢವಾಗಿ ವಿರೋಧಿಸಲು ಪ್ರತಿಜ್ಞೆ ಮಾಡಿದೆ ಅಂತ ಕೂಡ ಹೇಳಿದ್ದಾರೆ. ಮೊನ್ನೆ ಈ ಶೃಂಗಸಭೆ ಆರಂಭವಾದ ದಿನವೂ ಅಮೆರಿಕ ಡೆಮಾಕ್ರಸಿಯನ್ನು ಕೋಕಾಕೋಲಾ ರೀತಿ ಮಾರುತ್ತಿದೆ ಅಂತ ಇಂಗ್ಲಿಷ್ ರ್ಯಾಪ್ ಸಾಂಗ್ ಮೂಲಕ ಚೀನಾ ಟ್ರೋಲ್ ಮಾಡಿತ್ತು. ಬರೀ ಚೀನಾ ಮಾತ್ರವಲ್ಲ.. ರಷ್ಯಾವನ್ನೂ ಈ ಶೃಂಗಸಭೆಗೆ ಕರೆದಿರಲಿಲ್ಲ. ಎರಡೂ ದೇಶಗಳು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶೀತಲ ಸಮರದಂತೆ ಸೈದ್ಧಾಂತಿಕ ವಿಭಜನೆಯನ್ನು ಪ್ರಚೋದಿಸುತ್ತಿದ್ದಾರೆ ಅಂತ ಆರೋಪಿಸಿವೆ.
-masthmagaa.com

Contact Us for Advertisement

Leave a Reply