masthmagaa.com:

ದೆಹಲಿ: ಭಾರತದಲ್ಲಿ ಕೊರೋನಾ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರೋದಕ್ಕೆ ಜನರು ಕೊರೋನಾ ನಿಯಮಗಳನ್ನು ಉಲ್ಲಂಘಿಸುತ್ತಿರೋದೇ ಕಾರಣ ಅಂತ ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪೌಲ್ ಹೇಳಿದ್ದಾರೆ. ಭಾರತದಲ್ಲಿ ಇತ್ತೀಚೆಗೆ ಕೊರೋನಾ ತುಂಬಾ ಕಡಿಮೆಯಾಗಿತ್ತು. ಆದ್ರೆ ಜನ ಕೊರೋನಾ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿದ್ದು, ಮದುವೆ, ಸಾಮಾಜಿಕ ಸಭೆ-ಸಮಾರಂಭ ಸೇರಿದಂತೆ ಹೆಚ್ಚು ಜನಸೇರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಇಂಥಹ ಕಾರ್ಯಕ್ರಮಗಳು ಕೊರೋನಾದ ಸೂಪರ್​ ಸ್ಪ್ರೆಡರ್​​​​ ಆಗಿವೆ ಅಂತ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಜನ ಸ್ವಲ್ಪ ಎಚ್ಚೆತ್ತುಕೊಳ್ಳಬೇಕು.. ಮಾಸ್ಕ್ ಧರಿಸಬೇಕು. ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply