ವೀಕೆಂಡ್‌ ವಿತ್‌ ರಮೇಶ್‌ : ಮುಂದಿನ ವಾರ ಹಾಟ್‌ ಸೀಟ್‌ನಲ್ಲಿ ಡ್ಯಾನ್ಸ್‌ ಹಾಗೂ ಕನ್ನಡ ಮಾಸ್ಟರ್ಸ್‌ !

masthmagaa.com:

‘ವೀಕೆಂಡ್ ವಿತ್ ರಮೇಶ್ ಸೀಸನ್ 5’ ಕಾರ್ಯಕ್ರಮದಲ್ಲಿ ಮೋಹಕ ತಾರೆ ರಮ್ಯಾ, ಪ್ರಭುದೇವ, ಡಾ.ಸಿ.ಎನ್.ಮಂಜುನಾಥ್, ದತ್ತಣ್ಣ, ಧನಂಜಯ್ ಸೇರಿದಂತೆ ಹಲವು ಜನ ಸಾಧಕರ ಸೀಟ್ ಮೇಲೆ ಕೂತಿದ್ದರು. ಈ ವಾರ ಯಾರು ಹಾಟ್‌ ಸೀಟ್‌ ಮೇಲೆ ಕುಳಿತುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಜೀ ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ಈ ವಾರ ವೀಕೆಂಡ್‌ ವಿತ್‌ ರಮೇಶ್‌ ಅತಿಥಿ ಯಾರು ಗೆಸ್‌ ಮಾಡಿ ಎಂದು ಇಬ್ಬರು ಸಾಧಕರ ಬ್ಲರ್‌ ಪೋಟೋ ಹಂಚಿಕೊಂಡು, ಒಬ್ಬರು ಡ್ಯಾನ್ಸ್ ಲೋಕದ ಚಿನ್ನ; ಒಬ್ಬರ ಕನ್ನಡ ಕೇಳೋದೇ ಚೆನ್ನ..! ಈ ವೀಕೆಂಡ್‌ ಗೆಸ್ಟ್‌ಗಳು ಯಾರು ಹೇಳಿ? ಎಂದು ಬರೆದುಕೊಂಡಿದೆ.

ಅಭಿಮಾನಿಗಳು ಗೆಸ್‌ ಮಾಡಿ ಚಿನ್ನಿ ಪ್ರಕಾಶ್‌ ಹಾಗೂ ಡಾ. ನಾ ಸೋಮೆಶ್ವರ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಜೀ ವಾಹಿನಿಯ ಸುಳಿವಿನಂತೆ ಇಲ್ಲಿ ಒಬ್ಬರು ಡ್ಯಾನ್ಸ್‌ ಲೋಕದ ಚಿನ್ನ ಅಂದ್ರೆ ಚಿನ್ನಿ ಪ್ರಕಾಶ್‌ ಹಾಗೂ ಒಬ್ಬರ ಕನ್ನಡ ಕೇಳೋದೇ ಚೆನ್ನ ಅಂದ್ರೆ ಡಾ. ಸೋಮೆಶ್ವರ್‌.

ಚಿನ್ನಿ ಪ್ರಕಾಶ್ ಭಾರತೀಯ ಚಲನಚಿತ್ರ ನೃತ್ಯ ಸಂಯೋಜಕ, ಕಲಾ ನಿರ್ದೇಶಕ, ನಟ, ಚಿತ್ರಕಥೆ-ಬರಹಗಾರ ಹಾಗೂ ಸಿನಿಮಾ ನಿರ್ದೇಶಕ. ಅವರು ಹಲವಾರು ಬಾಲಿವುಡ್ ಚಲನಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿ ಹೆಸರುವಾಸಿಯಾಗಿದ್ದಾರೆ. ಚಿನ್ನಿ ಪ್ರಕಾಶ್ ಅವರು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಡಾ. ಸೋಮೇಶ್ವರ್ ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ಇವರ ಕ್ವಿಜ್‌ ಕಾರ್ಯಕ್ರಮ 4000 ಎಪಿಸೋಡ್‌ ದಾಟಿ ಮುಂದುವರೆದು ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಒಂದು ದಾಖಲೆಯನ್ನು ಸೃಷ್ಟಿಸಿದೆ. ಇವರು ವೃತ್ತಿಯಿಂದ ವೈದ್ಯರಾಗಿದ್ದಾರೆ ಹಾಗೂ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.

-masthmagaa.com

Contact Us for Advertisement

Leave a Reply