ಭಾರತಕ್ಕೆ ಭೇಟಿ ನೀಡಲಿದ್ದಾರೆ ಭೂತಾನ್‌ ದೊರೆ!

masthmagaa.com:

ನೆರೆಯ ರಾಷ್ಟ್ರ ಭೂತಾನ್‌ ದೇಶದ ರಾಜ ಜಿಗ್ಮೆ ಖೆಸರ್‌ ನಮ್ಗಿಯೆಲ್‌ ವಾಂಗ್‌ಚುಕ್ ಭಾರತಕ್ಕೆ ಬರ್ತಿದ್ದಾರೆ. ನವೆಂಬರ್‌ 3 ರಿಂದ 10ರವರೆಗೆ ಒಂದು ವಾರ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳನ್ನ ಭೇಟಿ ಮಾಡಲಿದ್ದಾರೆ. ಅಂದ್ಹಾಗೆ ಭೂತಾನ್‌ನ ಈ ಭೇಟಿ ಚೀನಾ-ಭೂತಾನ್‌ಗಳ ನಡುವಿನ 25ನೇ ಸುತ್ತುಗಳ ಬೌಂಡರಿ ಮಾತುಕತೆ ನಡೆದ ಕೆಲವು ವಾರಗಳಲ್ಲೆ ಫಿಕ್ಸ್‌ ಆಗಿದೆ. ಭಾರತದ ʻNeighbourhood First’ ಪಾಲಿಸಿಯ ಅತಿ ದೊಡ್ಡ ಫಲಾನುಭವಿಯಾಗಿರೊ ಭೂತಾನ್‌ ಕಳೆದ ವಾರವಷ್ಟೇ ಚೀನಾ ಜೊತೆ ಗಡಿ ಸಹಕಾರ ಅಗ್ರೀಮೆಂಟ್ ಒಂದಕ್ಕೆ ಸಹಿ ಹಾಕಿದೆ.‌ ಭೂತಾನ್‌ ಈ ಭೇಟಿಯಲ್ಲಿ ಇದೇ ಅಗ್ರಿಮೆಂಟಿನ ವಿಚಾರವಾಗಿ ತನ್ನ ನಿಲುವನ್ನ ಭಾರತದ ನಾಯಕರೊಂದಿಗೆ ಶೇರ್ ಮಾಡ್ಕೊಳ್ಳೋ ಯೋಚನೆ ಹೊಂದಿದೆ ಅಂತ ಅಧಿಕಾರಿಯೊಬ್ರು ಹೇಳಿದಾರೆ.

-masthmagaa.com

Contact Us for Advertisement

Leave a Reply