ಎಲ್ಲವೂ ತಾಲಿಬಾನಿಗಳ ಮೇಲೆಯೆ ನಿಂತಿದೆ : ಬೈಡೆನ್‌

masthmagaa.com:

ಅಫ್ಘಾನಿಸ್ತಾನದ ಬಿಕ್ಕಟ್ಟಿನ ವಿಚಾರವಾಗಿ ನಡೆದ ಸಭೆಯಲ್ಲಿ ತಾಲಿಬಾನಿಗಳ ವಿರುದ್ಧ ಜಿ7 ದೇಶಗಳು ಒಗ್ಗಟ್ಟಿನ ಮಂತ್ರ ಜಪಿಸಿವೆ. ಜಿ7 ರಾಷ್ಟ್ರಗಳ ನೇತೃತ್ವದ ಈ ಸಭೆಯಲ್ಲಿ ವಿಶ್ವಸಂಸ್ಥೆ, ನ್ಯಾಟೋ, ಯೂರೋಪಿಯನ್ ಯೂನಿಯನ್ ನಾಯಕರು ಕೂಡ ಭಾಗಿಯಾಗಿದ್ರು. ವಿಡಿಯೋ ಕಾನ್ಫರೆನ್ಸ್ ಬಳಿಕ ನಡೆದ ಈ ಮಿಟಿಂಗ್​ ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​, ಅಫ್ಘಾನಿಸ್ತಾನ ಮತ್ತು ತಾಲಿಬಾನ್ ವಿಚಾರದಲ್ಲಿ ಜಿ7 ರಾಷ್ಟ್ರಗಳು, ವಿಶ್ವಸಂಸ್ಥೆ, ನ್ಯಾಟೋ, ಯೂರೋಪಿಯನ್ ಯೂನಿಯನ್​​​​​ ನಿಲುವು ಒಂದೇ ಆಗಿದೆ. ಅಫ್ಘಾನಿಸ್ತಾನದ ಮುಂದಿನ ಸರ್ಕಾರಕ್ಕೆ ಮಾನ್ಯತೆ ನೀಡೋದು ಬಿಡೋದು ತಾಲಿಬಾನಿಗಳ ಮೇಲೆಯೇ ನಿಂತಿದೆ. ಅವರು ತಮ್ಮ ನೆಲವನ್ನು ಭಯೋತ್ಪಾದನೆಯ ಕೇಂದ್ರವಾಗಿ ಬಳಸ್ತಾರಾ ಇಲ್ವಾ ಅನ್ನೋದರ ಮೇಲೆ ನಿಂತಿದೆ ಅಂತ ಹೇಳಿದ್ದಾರೆ. ತಾಲಿಬಾನಿಗಳ ಕಾರ್ಯ ಮತ್ತು ಅವರ ವರ್ತನೆಗಳಿಂದ ನಾವು ಅವರ ಬಗ್ಗೆ ನಿರ್ಧಾರಕ್ಕೆ ಬರ್ತೀವಿ. ಅಫ್ಗಾನಿಸ್ತಾನದ ಜನರಿಗೆ ನೆರವು ನೀಡಲು ನಾವು ಬದ್ಧರಾಗಿದ್ದೀವಿ.

-masthmagaa.com

Contact Us for Advertisement

Leave a Reply