ಸಲಿಂಗ ವಿವಾಹದ ತೀರ್ಪಿನ ಮರುದಿನ ಸುಪ್ರೀಂ ಕೋರ್ಟ್‌ ಮುಂದೆ ಗೇ-ಕಪಲ್ಸ್‌ ಮಾಡಿದ್ದೇನು?

masthmagaa.com:

ಸಲಿಂಗ ವಿವಾಹದ ಕುರಿತು ಕಾಯ್ದೆ ಮಾಡೋದು ಪಾರ್ಲಿಮೆಂಟ್‌ಗೆ ಬಿಟ್ಟಿದ್ದು, ಜನಪ್ರತಿನಿಧಿಗಳಿಗೆ ಬಿಟ್ಟಿದ್ದು ಅಂತ ಸುಪ್ರೀಂ ಹೇಳಿದ ಬೆನ್ನಲ್ಲೇ, ಸಲಿಂಗ ಜೋಡಿಯೊಂದು ಸುಪ್ರೀಂಕೋರ್ಟ್‌ ಮುಂದೆನೇ ಎಂಗೇಜ್‌ ಆಗಿದ್ದಾರೆ. ರೈಟರ್‌ ಅನನ್ಯ ಕೋಟಿಯಾ ಹಾಗೂ ಲಾಯರ್‌ ಉತ್ಕರ್ಷ್‌ ಸಕ್ಸೇನ ಜೋಡಿ ಸುಪ್ರೀಂ ಕೋರ್ಟ್‌ ಆವರಣದಲ್ಲೇ ರಿಂಗ್‌ ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ಅವರು “ಸುಪ್ರೀಂ ಕೋರ್ಟ್‌ ಇಂದು ನಮ್ಮ ಹಕ್ಕುಗಳನ್ನ ನಮಗೆ ಕೊಡದೇ ಇರಬಹುದು. ಆದ್ರೆ ಇದಕ್ಕಾಗಿ ನಾವು ಇನ್ನೊಂದು ದಿನ ಫೈಟ್‌ ಮಾಡ್ತೇವೆ” ಅಂದಿದ್ದಾರೆ. ಅಂದ್ಹಾಗೆ ಸಲಿಂಗ ಜೋಡಿಗಳಿಗೆ ಮಕ್ಕಳನ್ನ ದತ್ತು ತೆಗೆದುಕೊಳ್ಳೋ ಹಕ್ಕು ನೀಡುವ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ ನಿನ್ನೆ ತೀರ್ಪು ನೀಡಿತ್ತು.

-masthmagaa.com

Contact Us for Advertisement

Leave a Reply