ರಿಲಾಯನ್ಸ್ ವಿರುದ್ಧದ ಕಾನೂನು ಹೋರಾಟ ಗೆದ್ದ ಅಮೆಜಾನ್!

masthmagaa.com:

ರಿಲಾಯನ್ಸ್ ವಿರುದ್ಧದ ಕಾನೂನು ಸಮರದಲ್ಲಿ ಅಮೆಜಾನ್ ಕೈ ಮೇಲಾಗಿದೆ. ಫ್ಯೂಚರ್ ರೀಟೇಲ್​​​​​​​ 3.4 ಬಿಲಿಯನ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ 24,731 ಕೋಟಿ ರೂಪಾಯಿಗೆ ತನ್ನ ರೀಟೇಲ್ ಅಸೆಟ್​ನ್ನು ರಿಲಾಯನ್ಸ್​​ಗೆ ಮಾಡಲು ಡೀಲ್ ಮಾಡಿಕೊಂಡಿತ್ತು. ಆದ್ರೆ ಇದನ್ನು ವಿರೋಧಿಸಿ ಅಮೆಜಾನ್ ಕಾನೂನು ಸಮರ ಶುರು ಮಾಡಿತ್ತು. ಯಾಕಂದ್ರೆ ಅಮೆಜಾನ್ ಸಂಸ್ಥೆ ಫ್ಯೂಚರ್ ಕೂಪನ್ಸ್ ಲಿಮಿಟೆಡ್​​​​​​ನಲ್ಲಿ 49 ಪರ್ಸೆಂಟ್ ಶೇರು ಹೊಂದಿದೆ. ಈ ಫ್ಯೂಚರ್ ಕೂಪನ್ಸ್ ಲಿಮಿಟೆಡ್ ಸಂಸ್ಥೆ ಫ್ಯೂಚರ್ ರೀಟೇಲ್​​​​ ಅಂದ್ರೆ ರಿಲಾಯನ್ಸ್ ಜೊತೆ ಒಪ್ಪಂದ ಮಾಡ್ಕೊಂಡಿದೆಯಲ್ವಾ ಆ ಸಂಸ್ಥೆಯಲ್ಲಿ 9.82 ಪರ್ಸೆಂಟ್ ಶೇರು ಹೊಂದಿತ್ತು. ಅದು ಅಲ್ಲದೆ ಅಮೆಜಾನ್ ಫ್ಯೂಚರ್​​​​ ಕೂಪನ್ಸ್​​ ಜೊತೆ 2019ರಲ್ಲಿ ಒಂದು ಒಪ್ಪಂದ ಮಾಡ್ಕೊಂಡಿತ್ತು. ಅದ್ರಲ್ಲಿ ಫ್ಯೂಚರ್ ರೀಟೇಲ್ ಯಾರಿಗೆಲ್ಲಾ ತನ್ನ ಅಸೆಟ್ ಮಾರಬಾರದು ಅನ್ನೋದನ್ನ ಕೂಡ ಉಲ್ಲೇಖಿಸಲಾಗಿತ್ತು. ಅದ್ರಲ್ಲಿ ರಿಲಾಯನ್ಸ್ ಕೂಡ ಒಂದಾಗಿತ್ತು. ಆದ್ರೆ ನಂತರದಲ್ಲಿ ಫ್ಯೂಚರ್ ರೀಟೇಲ್ ರಿಲಾಯನ್ಸ್ ಜೊತೆ 24,731 ಕೋಟಿ ರೂಪಾಯಿ ಡೀಲ್ ಮಾಡ್ಕೊಂಡು ತನ್ನ ಆಸ್ತಿ ಮಾರೋಕೆ ಮುಂದಾಗಿತ್ತು. ಅದ್ರ ವಿರುದ್ಧ ಅಮೆಜಾನ್ ಕೋರ್ಟ್​ ಮೆಟ್ಟಿಲೇರಿತ್ತು. ಇದೀಗ ಈ ಡೀಲ್​​​​​ ಮುಂದುವರಿಸಲು ಸಾಧ್ಯವಿಲ್ಲ ಅಂತ ಸುಪ್ರೀಂಕೋರ್ಟ್​​​ ಆದೇಶಿಸಿ, ಅಮೆಜಾನ್ ಬಾಯಿಗೆ ಉಂಡೆಬೆಲ್ಲ ತುರುಕಿದೆ.

-masthmagaa.com

Contact Us for Advertisement

Leave a Reply