ಒಮೈಕ್ರಾನ್ ಬಗ್ಗೆ ಬಂತು ನೋಡಿ ಗುಡ್​​ನ್ಯೂಸ್​!

masthmagaa.com:

ವಿಶ್ವದೆಲ್ಲೆಡೆ ಒಮೈಕ್ರಾನ್ ಆತಂಕ ಮನೆ ಮಾಡಿರೋ ಬೆನ್ನಲ್ಲೇ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದ ಅಧ್ಯಯನವೊಂದು ಖುಷಿ ಸುದ್ದಿ ನೀಡಿದೆ. ಇಂಗ್ಲೆಂಡ್ ಮತ್ತು ಸ್ಕಾಟ್​​ಲ್ಯಾಂಡ್​​ನಲ್ಲಿ ನಡೆದ ಈ ಅಧ್ಯಯನದಿಂದ ಡೆಲ್ಟಾಗಿ ಹೋಲಿಸಿದ್ರೆ ಒಮೈಕ್ರಾನ್ ರೂಪಾಂತರಿ ಅಪಾಯ ಕಡಿಮೆ.. ಆಸ್ಪತ್ರೆಗೆ ದಾಖಲಾಗುವಂತೆ ಮಾಡೋ ಸಾಧ್ಯತೆ ಕಡಿಮೆ ಅಂತ ಗೊತ್ತಾಗಿದೆ. ಸ್ಕಾಟ್​​ಲ್ಯಾಂಡ್​​ನಲ್ಲಿ ನಡೆದ ಅಧ್ಯಯನವನ್ನು ನವೆಂಬರ್ ಮತ್ತು ಡಿಸೆಂಬರ್​ನಲ್ಲಿ ಪತ್ತೆಯಾದ ಕೊರೋನಾ ವೈರಾಣುಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗಿತ್ತು. ಇದ್ರಲ್ಲಿ ಡೆಲ್ಟಾಗೆ ಹೋಲಿಸಿದ್ರೆ ಒಮೈಕ್ರಾನ್​​​ ಬಂದು ಆಸ್ಪತ್ರೆ ಸೇರೋರ ಸಂಖ್ಯೆ 3ನೇ 2ರಷ್ಟು ಕಡಿಮೆ ಅಂತ ಹೇಳಲಾಗಿದೆ. ಅದೇ ಇಂಗ್ಲೆಂಡ್​ನಲ್ಲಿ ನಡೆದ ಅಧ್ಯಯನದ ಪ್ರಕಾರ ಡೆಲ್ಟಾಗೆ ಹೋಲಿಸಿದ್ರೆ ಒಮೈಕ್ರಾನ್ ಬಂದು ಆಸ್ಪತ್ರೆ ಹೋಗಿ ಚೆಕಪ್ ಮಾಡಿಸೋರ ಸಂಖ್ಯೆ 20ರಿಂದ 25 ಪರ್ಸೆಂಟ್​ನಷ್ಟು ಕಡಿಮೆ ಇರಲಿದೆ. ಅದೇ ಆಸ್ಪತ್ರೆಗೆ ದಾಖಲಾಗೋರ ವಿಚಾರಕ್ಕೆ ಬಂದ್ರೆ ಡೆಲ್ಟಾಗಿಂತ 40ರಿಂದ 45 ಪರ್ಸೆಂಟ್​​ನಷ್ಟು ಕಡಿಮೆ ಇರುತ್ತೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply