ಚೀನಾ ವಿದೇಶಾಂಗ ಸಚಿವ ನಾಪತ್ತೆ?

masthmagaa.com:

ಚೀನಾ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಕಳೆದ ಮೂರು ವಾರಗಳಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದೇ ಇರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೂನ್ 25ರಂದು ಬೀಜಿಂಗ್‍ನಲ್ಲಿ ಶ್ರೀಲಂಕಾ, ರಷ್ಯಾ ಮತ್ತು ವಿಯೆಟ್ನಾಂನ ನಿಯೋಗದ ಜೊತೆ ಸಭೆ ನಡೆಸಿದ ಬಳಿಕ ಗಾಂಗ್‌ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಕಳೆದ ವಾರ ಇಂಡೊನೇಷ್ಯಾದಲ್ಲಿ ನಡೆದಿದ್ದ ಆಸಿಯಾನ್ ವಿದೇಶಾಂಗ ಸಚಿವರ ಅಂತರಾಷ್ಟ್ರೀಯ ಸಮ್ಮೇಳನಕ್ಕೂ ಗಾಂಗ್‌ ಗೈರು ಹಾಜರಾಗಿದ್ದರು. ಈಗ ಅವ್ರ ಸ್ಥಾನವನ್ನ ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ಮತ್ತು ಕಮ್ಯುನಿಸ್ಟ್‌ ಪಕ್ಷದ ಸದಸ್ಯ ವಾಂಗ್ ಯೀ ಅವ್ರು ನಿಭಾಯಿಸುತ್ತಿದ್ದಾರೆ. ಇತ್ತ ಚೀನಾ ಮಾತ್ರ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಗಾಂಗ್‌ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ತಿಲ್ಲ ಅಂತ ಹೇಳ್ತಿದೆ. ಆದ್ರೆ ಹಲವು ಅನುಮಾನಗಳು ಕಾಡ್ತಿವೆ. ಅಂದ್ಹಾಗೆ 2 ವರ್ಷಗಳ ಕಾಲ ಅಮೆರಿಕದಲ್ಲಿ ಚೀನಾ ರಾಯಭಾರಿಯಾಗಿದ್ದ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ರ ಮಿತ್ರರಾಗಿದ್ದ ಕ್ವಿನ್‌ರನ್ನ ಕಳೆದ ವರ್ಷ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಗಿತ್ತು.

-masthmagaa.com

Contact Us for Advertisement

Leave a Reply