‘ನಾನಿನ್ನೂ ಬದ್ಕಿದೀನಿ’ ಎಂದ ಆಫ್ಘನ್ ಉಪ ಪ್ರಧಾನಿ ಮುಲ್ಲಾ ಬರಾದರ್

masthmagaa.com:

ಅಫ್ಘನಿಸ್ತಾನ ಉಪ ಪ್ರಧಾನಿ ಅಂತ ಘೋಷಿಸಲಾಗಿರೋ ಮುಲ್ಲಾ ಬರಾದರ್ ಪ್ರತ್ಯಕ್ಷರಾಗಿದ್ದಾರೆ. ಒಳಗೊಳಗೇ ಜಗಳ ಆಗಿ, ಹಕ್ಕಾನಿಗಳೊಂದಿಗೆ ಹೊಡೆದಾಡಿಕೊಂಡು ಬರಾದಾರ್ ಹೋಗೇ ಬಿಟ್ಟಿದ್ದಾರೆ ವರದಿಯಾಗಿತ್ತು. ಆದ್ರೆ ಈಗ ಆಫ್ಘನ್ ರಾಷ್ಟ್ರೀಯ ಮಾಧ್ಯಮಕ್ಕೆ ಇಂಟರ್ವ್ಯೂ ನೀಡಿದ್ದಾರೆ. ನಾನು ಹೋಗಿಲ್ಲ. ಇದೀನೀ. ನೋಡಿ ಅಂತ ಬಂದಿದ್ದಾರೆ. ಇದಕ್ಕೂ ಮೊದಲು ಬರಾದರ್ ನಾನು ಬದ್ಕಿದೀನಿ ಸ್ವಾಮಿ ಅಂತ ಆಡಿಯೋ ಕ್ಲಿಪ್ ರಿಲೀಸ್ ಮಾಡಿದ್ರು. ಆದ್ರೆ ಆಡಿಯೋಕೆ, ವಿಡಿಯೋ ಯಾಕಿಲ್ಲ.? ಇದು ಹಳೆದಿರ್ಬೋದು ಅಂತ ಅನುಮಾನ ವ್ಯಕ್ತವಾಗಿತ್ತು. ಸೋ ಈಗ ಕ್ಯಾಮೆರಾ ಮುಂದೆ ಬರಾದರ್ ಬಂದಿದ್ದಾರೆ.

-masthmagaa.com

Contact Us for Advertisement

Leave a Reply