USA ಅಧ್ಯಕ್ಷರ ಭವನದಲ್ಲಿ ಡ್ರಗ್ ಪತ್ತೆ!

masthmagaa.com:

ಅಮೆರಿಕದ ಶ್ವೇತಭವನದಲ್ಲಿ ಕಳೆದ ಭಾನುವಾರ ಅನುಮಾನಸ್ಪದವಾಗಿ ವೈಟ್‌ ಪೌಡರ್ ಪತ್ತೆಯಾಗಿದ್ದು, ಕೆಲ ಕಾಲ ಎಲ್ಲರಲ್ಲಿ ಆತಂಕ ಮೂಡಿಸಿತ್ತು. ಇದೀಗ ಈ ಪೌಡರ್‌ ನಶಾ ಸಾಮಾಗ್ರಿ ಅಂತ ತಿಳಿದು ಬಂದಿದೆ. ಭಾನುವಾರ 8.45 ರ ಹೊತ್ತಿಗೆ ಸಿಕ್ರೇಟ್‌ ಸರ್ವೀಸ್‌ ಏಜೆಂಟ್‌ಗಳಿಂದ ಸಾರ್ವಜನಿಕರ ಎಂಟ್ರಿಗೆ ಅವಕಾಶವಿರೊ ವೆಸ್ಟ್‌ ವಿಂಗ್‌ನಲ್ಲಿ ಈ ಪೌಡರ್‌ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ವೈಟ್‌ ಹೌಸ್‌ನಿಂದ ಎಲ್ಲರನ್ನ ಹೊರಗೆ ಕಳಿಸಿ, ಕಾಂಪ್ಲೆಕ್ಸ್‌ನ್ನ ಖಾಲಿ ಮಾಡಿಸಲಾಗಿತ್ತು. ಇನ್ನು ಘಟನೆ ಸಮಯದಲ್ಲಿ ಅಧ್ಯಕ್ಷ ಜೋ ಬೈಡೆನ್‌ ವೈಟ್‌ಹೌಸ್‌ನಲ್ಲಿ ಇರಲಿಲ್ಲ ಅಂತ ತಿಳಿದು ಬಂದಿದೆ. ಇನ್ನು ವಿಷಯ ತಿಳಿದ ಬಳಿಕ ಸ್ಥಳಕ್ಕೆ ಫೈರ್‌ ಹಾಗೂ ಎಮರ್ಜನ್ಸಿ ಸರ್ವೀಸ್‌ನ ಸಿಬ್ಬಂದಿ ಬಂದಿದ್ದು, ಪತ್ತೆಯಾದ ವಸ್ತುವನ್ನ ಟೆಸ್ಟ್‌ ಮಾಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ಬಿಳಿ ಪೌಡರ್‌ ನಶಾ ಸಾಮಾಗ್ರಿ ಅಂತ ತಿಳಿದು ಬಂದಿದೆ. ಬಳಿಕ ವೈಟ್‌ಹೌಸ್‌ನ್ನ ರಿಒಪನ್‌ ಮಾಡಿದ್ದು, ಪೌಡರ್‌ನ್ನ ಹೆಚ್ಚಿನ ಪರೀಕ್ಷೆಗೆ ಕಳಿಸಲಾಗಿದೆ. ಅಂದ್ಹಾಗೆ ಈ ವೆಸ್ಟ್‌ ವಿಂಗ್‌, ಅಧ್ಯಕ್ಷರ ಕಚೇರಿಗೆ ಕನೆಕ್ಟ್‌ ಆಗಿದೆ. ಅಲ್ದೇ ಕ್ಯಾಬಿನೆಟ್‌ ರೂಮ್‌, ಪ್ರೆಸ್‌ ರೂಮ್‌ ಕೂಡ ಅದರ ಬಳಿಯಲ್ಲೇ ಇವೆ. ಅಧ್ಯಕ್ಷರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಕೂಡ ವೆಸ್ಟ್‌ ವಿಂಗ್‌ ಜಾಗದಲ್ಲೇ ವರ್ಕ್‌ ಮಾಡ್ತಾರೆ. ಇನ್ನು ಈ ವೆಸ್ಟ್‌ ವಿಂಗ್‌ ಏರಿಯಾಕ್ಕೆ ಪ್ರತಿದಿನ ನೂರಾರು ಜನ ಭೇಟಿ ನೀಡ್ತಾರೆ ಎನ್ನಲಾಗಿದೆ.

 

-masthmagaa.com

Contact Us for Advertisement

Leave a Reply