ಮೋದಿ ಒಬ್ಬೇ ಒಬ್ಬ ಮುಸ್ಲಿಂ ವ್ಯಕ್ತಿಗೆ ಹಗ್‌ ಮಾಡಿದ್ದಾರಾ? ಓವೈಸಿ ಪ್ರಶ್ನೆ

masthmagaa.com:

ಭಾರತದಲ್ಲಿ ಮುಸ್ಲಿಮರು ಬದುಕೋಕೆ ಯಾವುದೇ ಭಯ ಇಲ್ಲ. ಆದ್ರೆ ಮುಸ್ಲಿಂರು ತಮ್ಮ ಶ್ರೇಷ್ಠತೆಯ, ಅಬ್ಬರದ ಮಾತುಗಾರಿಕೆಯನ್ನ ಬಿಟ್ಟುಬಿಡಬೇಕು ಅಂತ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಇಂಟರ್‌ವ್ಯೂನಲ್ಲಿ ಮಾತನಾಡಿದ ಭಾಗವತ್‌, ಹಿಂದೂಸ್ಥಾನ ಹಿಂದೂಸ್ಥಾನವಾಗಿ ಉಳೀಬೇಕು. ದೇಶದಲ್ಲಿ ಇಸ್ಲಾಂಗೆ ಯಾವುದೇ ತೊಂದ್ರೆ ಇಲ್ಲ. ಆದ್ರೆ ಮುಸ್ಲಿಮರು ತಮ್ಮ ಶ್ರೇಷ್ಠತೆಯ, ಅಬ್ಬರದ ಮಾತುಗಾರಿಕೆಯನ್ನ ಬಿಡಬೇಕು. ನಾವು ಉತ್ಕೃಷ್ಟ ಜನಾಂಗದವರು, ನಾವು ಈ ಭೂಮಿಯನ್ನೇ ಆಳಿದ್ದೀವಿ , ಅದನ್ನ ಮತ್ತೊಮ್ಮೆ ಆಳ್ತೀವಿ. ನಮ್ಮ ದಾರಿ ಮಾತ್ರ ಸರಿ, ಉಳಿದವರೆಲ್ಲರೂ ತಪ್ಪು, ನಾವು ಎಲ್ರಿಗಿಂತ ವಿಭಿನ್ನವಾಗಿದ್ದೀವಿ, ನಾವು ಹಾಗೆ ಮುಂದುವರಿಯುತೀವಿ. ನಾವು ಒಟ್ಟಿಗೆ ಬದುಕೋಕೆ ಸಾಧ್ಯವಿಲ್ಲ ಅನ್ನೋದನ್ನ ಮುಸ್ಲಿಮರು ಮೊದಲು ಬಿಟ್ಟುಬಿಡಬೇಕು ಅಂತ ಹೇಳಿದ್ದಾರೆ. ಹಾಗೆ ಹಿಂದೂ ಅಥವಾ ಕಮ್ಯುನಿಸ್ಟ್ ಅನ್ನೋ ತರ್ಕವನ್ನು ಸಹ ಬಿಡಬೇಕು ಅಂತ ಹೇಳಿದ್ದಾರೆ. ಇನ್ನು ಜನಸಂಖ್ಯಾ ನಿಯಂತ್ರಣ ಹಾಗೇ ಸಲಿಂಗ ಸಮುದಾಯವರ ಬಗ್ಗೆ ಕೂಡ ಮಾತನಾಡಿದ ಭಾಗವತ್‌, ಮನುಷ್ಯರು ಇರೋವರೆಗೂ ವೈವಿಧ್ಯತೆ ಇರೋ ಜನ ಇರ್ತಾರೆ. ಇದೊಂದು ಬಯೋಲಾಜಿಕಲ್‌ ಅಂದ್ರೆ ಜೈವಿಕ ಜೀವನ ವಿಧಾನ ಅಷ್ಟೇ. ಅವರು ತಮ್ಮದೇ ಆದ ಖಾಸಗಿ ಅವಕಾಶವನ್ನು ಹೊಂದಿರಬೇಕು. ಅವರು ಕೂಡ ಸಮಾಜದ ಭಾಗವಾಗಿದ್ದಾರೆ ಅಂತ ನಾವು ಭಾವಿಸ್ತೀವಿ. ಇದು ತುಂಬಾ ಸರಳವಾದ ಸಮಸ್ಯೆ, ಇದನ್ನು ಪರಿಹರಿಸೋಕೆ ಮಾಡುವ ಎಲ್ಲಾ ಪ್ರಯತ್ನಗಳು ವ್ಯರ್ಥ ಅಂತ ಹೇಳಿದ್ದಾರೆ. ಇನ್ನು ಮುಸ್ಲಿಮರು ತಮ್ಮ ಶ್ರೇಷ್ಠತೆಯ ಮಾತುಗಾರಿಕೆ ಬಿಡಬೇಕು ಅನ್ನೋ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಸಂಸದ ಅಸಾದುದ್ದೀನ್‌ ಓವೈಸಿ, ಮುಸ್ಲಿಮರು ತಮ್ಮ ನಂಬಿಕೆಗಳನ್ನ ಫಾಲೋ ಮಾಡೋದಕ್ಕೆ, ಭಾರತದಲ್ಲಿ ಇರೋಕೆ ಪರ್ಮಿಷನ್‌ ಕೊಡೋದಕ್ಕೆ ಮೋಹನ್‌ ಭಾಗವತ್‌ ಯಾರು? ನಮಗೆ ಕಂಡಿಷನ್‌ ಹಾಕೋದಕ್ಕೆ ಮೋಹನ್‌ ಯಾರು? ಅಲ್ಲಾ ಇಚ್ಚೆಯಿಂದ ನಾವು ಭಾರತೀಯರಾಗಿ ಹುಟ್ಟಿದ್ದೇವೆ. ನಾವು ನಮ್ಮ ನಂಬಿಕೆಯನ್ನ ಅಡ್ಜೆಸ್ಟ್‌ ಮಾಡಿಕೊಂಡು ಹೋಗೋಕೆ, ಅಥವಾ ನಾಗ್ಪುರದಲ್ಲಿರೋ ಅಪಾದಿತ ಬ್ರಹ್ಮಚಾರಿಗಳನ್ನ ಮೆಚ್ಚಿಸೋಕೆ ನಾವು ಇಲ್ಲಿ ಇರೋದಲ್ಲಅಂತ ಹೇಳಿದ್ದಾರೆ. ಜೊತೆಗೆ ಮೋದಿ ವಿರುದ್ದವೂ ಕಿಡಿಕಾರಿರೋ ಓವೈಸಿ, ಮೋದಿ ಜಗತ್ತಿನ ಎಲ್ಲಾ ಮುಸ್ಲಿಂ ನಾಯಕರನ್ನ ಅಪ್ಪಿಕೊಳ್ತಾರೆ. ಹಗ್‌ ಮಾಡ್ತಾರೆ. ಆದ್ರೆ ಈ ದೇಶದ ಒಬ್ಬೇ ಒಬ್ಬ ಮುಸ್ಲಿಮನನ್ನ ಅವರು ಅಪ್ಪಿಕೊಂಡಿದ್ದನ್ನ ನಾನು ನೋಡೇ ಇಲ್ಲ ಅಂತ ಹೇಳಿದ್ದಾರೆ. ಇತ್ತ ಮೋಹನ್‌ ಭಾಗವತ್‌ ಅವರ ಹೇಳಿಕೆ ಸಂವಿಧಾನಕ್ಕೆ ವಿರುದ್ದ, ಹೈಲೀ ಅಬ್ಜೆಕ್ಷನಬಲ್‌.. ಅದನ್ನ ಒಪ್ಪಿಕೊಳ್ಳೋಕೆ ಆಗಲ್ಲ ಅಂತ ಸಿಪಿಎಂ ನಾಯಕಿ ಬೃಂದಾ ಕಾರತ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply