ಹಕ್ಕಿಜ್ವರದಿಂದ ಹೆಚ್ಚಾಗ್ತಿದೆ ಮಾನವರ ಸಾವಿನ ಸಂಖ್ಯೆ: WHO ಕಳವಳ!

masthmagaa.com:

ಸದ್ಯ ವಿಶ್ವದಲ್ಲಿ ಸದ್ದು ಮಾಡ್ತಿರೊ H5N1 ಹಕ್ಕಿಜ್ವರ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆಯ(WHO) ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಕ್ಕಿಜ್ವರ ಮಾನವರಿಗೆ ಹರಡಿ ಸಾಯ್ತಿರೊರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗ್ತಿದೆ ಅಂತ WHO ತಿಳಿಸಿದೆ. 2020ರಿಂದ ಕಾಣಿಸಿಕೊಳ್ತಿರೊ ಈ ಹಕ್ಕಿಜ್ವರಕ್ಕೆ 1ಕೋಟಿಗೂ ಅಧಿಕ ಕೋಳಿಗಳು ಬಲಿಯಾಗಿವೆ. ಅದ್ರಲ್ಲೂ ಇತ್ತೀಚಿಗೆ ಬಂದ ವರದಿಯೊಂದರ ಪ್ರಕಾರ, ಅಮೆರಿಕದಲ್ಲಿ ದೇಶಿಯ ದನಗಳು ಸೇರಿದಂತೆ ವಿವಿಧ ತಳಿಯ ಪ್ರಾಣಿಗಳಲ್ಲಿ ಈ ಹಕ್ಕಿಜ್ವರ ಕಾಣಿಸಿ ಕೊಳ್ತಿರೊ ಪರಿಣಾಮ ಮಾನವನಿಗೆ ಈ ರೋಗ ಹರಡಲು ಇನ್ನಷ್ಟು ಸಹಕಾರಿಯಾಗ್ತಿದೆ ಅಂತ WHO ಕಳವಳ ವ್ಯಕ್ತ ಪಡಿಸಿದೆ. ಅಲ್ಧೇ ಈ ರೋಗ ಮನುಷ್ಯ ಹರಡ್ತಿರೊದ್ರಿಂದ ಜಾಗೃತವಾಗಿರಿ ಅಂತ WHOನ ಮುಖ್ಯ ವಿಜ್ಞಾನಿ ಜೆರೆಮಿ ಫರ್ರಾರ್‌ ಅಮೆರಿಕದ ಜಿನಿವಾದಲ್ಲಿ ಕರೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply