ಕೊರೋನಾ ಹುಟ್ಟಿದ್ದು ಲ್ಯಾಬ್​ನಲ್ಲಿ ಎಂದ ಅಮೆರಿಕ ಸಾಕ್ಷ್ಯ ಕೊಟ್ಟಿಲ್ಲ: WHO

masthmagaa.com:

ಕೊರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್​ನಲ್ಲಿ ಹುಟ್ಟಿದೆ ಅನ್ನೋದಕ್ಕೆ ಅಮೆರಿಕ ಯಾವುದೇ ಸಾಕ್ಷ್ಯ ನೀಡಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಾಣುವಿಗೂ ವುಹಾನ್ ಲ್ಯಾಬ್​ಗೂ ಸಂಬಂಧವಿದೆ ಅನ್ನೋದಕ್ಕೆ ನಮ್ಮ ಬಳಿ ಸಾಕ್ಷ್ಯ ಇದೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ಹೇಳುತ್ತಿರೋ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಈ ರೀತಿ ಹೇಳಿದೆ.

ಅಮೆರಿಕದ ಆಂತರಿಕ ಕಾರ್ಯದರ್ಶಿ ಮೈಕ್ ಪೊಂಪಿಯೊ ಕೂಡ ಈ ಸಂಬಂಧ ನಮಗೆ ಬಲವಾದ ಸಾಕ್ಷ್ಯ ಸಿಕ್ಕಿದೆ ಅಂತ ಹೇಳಿದ್ರು. ಆದ್ರೆ ಇದುವರೆಗೆ ಯಾವುದೇ ಸಾಕ್ಷ್ಯವನ್ನು ಸಾರ್ವಜನಿಕವಾಗಿ ಪ್ರಸ್ತುತಪಡಿಸಿಲ್ಲ ಅಥವಾ ನಮಗೂ ಕೊಟ್ಟಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಪರಿಸ್ಥಿತಿ ನಿರ್ದೇಶಕ ಡಾ. ಮೈಕಲ್ ರ್ಯಾನ್ ಹೇಳಿದ್ದಾರೆ.  ಹೀಗಾಗಿ ನಮ್ಮ ದೃಷ್ಟಿಯಲ್ಲಿ ಅಮೆರಿಕದ ಈ ಆರೋಪ ಕೇವಲ ಕಾಲ್ಪನಿಕ ಎಂದಿದ್ದಾರೆ.

ಅಲ್ಲದೆ ಒಂದ್ವೇಳೆ ಅಂತಹ ಸಾಕ್ಷ್ಯವೇನಾದ್ರೂ ಇದ್ದರೆ ಅದನ್ನು ಸ್ವೀಕರಿಸಲು ನಾವು ತಯಾರಿದ್ದೇವೆ. ಆದ್ರೆ ಸಾಕ್ಷ್ಯವನ್ನು ಕೊಡಬೇಕಾ, ಕೊಡೋದಾದ್ರೆ ಯಾವಾಗ ಕೊಡಬೇಕು ಅನ್ನೋದನ್ನ ನಿರ್ಧರಿಸುವ ಅಧಿಕಾರ ಅಮೆರಿಕ ಸರ್ಕಾರಕ್ಕಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply