ಶೀಘ್ರದಲ್ಲೇ ಟ್ರಾಕೋಮ ಮುಕ್ತ ದೇಶವಾಗಲಿದೆ ಭಾರತ!

masthmagaa.com:

ಭಾರತವನ್ನ ಕಣ್ಣಿನ ಖಾಯಿಲೆಯಾಗಿರೋ ಟ್ರಾಕೋಮಾ ಮುಕ್ತ ದೇಶ ಅಂತ ಶೀಘ್ರದಲ್ಲೇ WHO ಅನೌನ್ಸ್‌ ಮಾಡಲಿದೆ ಅಂತ ಮಾಹಿತಿ ಸಿಕ್ಕಿದೆ. ಈ ನಿಟ್ಟಿನಲ್ಲಿ AIIMS ಹಾಗೂ WHO ತಂಡ ಜಂಟಿಯಾಗಿ ಉಳಿದಿರುವ ಟ್ರಾಕೋಮ ಕೇಸ್‌ಗಳ ಬಗ್ಗೆ ಅಧ್ಯಯನ ಮಾಡ್ತಿವೆ. ಅಧ್ಯಯನವನ್ನ ಆದಷ್ಟು ಬೇಗ ಪೂರ್ಣಗೊಳಿಸಿ ವರದಿಯನ್ನ ಕೇಂದ್ರ ಆರೋಗ್ಯ ಸಚಿವಾಲಯದ ಮುಂದೆ ಇಡಲಾಗುವುದು. ಇದಾದ ಬಳಿಕ ವರದಿಗೆ ಅಂತಿಮವಾಗಿ WHO ಅನುಮೋದನೆ ನೀಡ್ಬೇಕಾಗುತ್ತೆ ಅಂತ AIIMS ಹೇಳಿದೆ. WHO ಪ್ರಕಾರ ಸೋಂಕಿನ ಹರಡುವಿಕೆ ಪ್ರಮಾಣ 5%ಗಿಂತ ಕಡಿಮೆ ಇರ್ಬೇಕು. ನಮ್ಮ ಪ್ರಾಥಮಿಕ ಅಧ್ಯಯನದಲ್ಲಿ ಹರಡುವಿಕೆ ಪ್ರಮಾಣ 3.5% ಇದೆ ಅಂತ AIIMS ಹೇಳಿದೆ. ಅಂದ್ಹಾಗೆ ಟ್ರಾಕೋಮಾ ಕಣ್ಣಿನ ರೋಗ ಕ್ಲಾಮಿಡಿಯಾ ಟ್ರಾಕೋಮೈಟಿಸ್‌ ಅನ್ನೊ ಬ್ಯಾಕ್ಟೀರಿಯಾದಿಂದ ಬರುತ್ತೆ ಹಾಗೂ ಇದ್ರಿಂದ ರೋಗಿಗಳು ದೃಷ್ಠಿ ಕಳೆದುಕೊಳ್ಳುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply