ಜಾಕ್​​​ ಮಾಗೆ ಸಂಕಷ್ಟದ ಮೇಲೆ ಸಂಕಷ್ಟ! ಈಗ ಏನಾಯ್ತು ಗೊತ್ತಾ?

masthmagaa.com:

ಚೀನಾದ ಬ್ಯುಸಿನೆಸ್ ಮ್ಯಾಗ್ನೆಟ್ ಜಾಕ್​ ಮಾ ಹುಪಾನ್ ಯುನಿವರ್ಸಿಟಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ಧಾರೆ. 6 ವರ್ಷಗಳ ಹಿಂದೆ ಪಾರ್ಟ್‌ನರ್​ಶಿಪ್​​ನಲ್ಲಿ ಈ ಬ್ಯುಸಿನೆಸ್​ ಅಕಾಡೆಮಿಯನ್ನು ಜಾಕ್​ಮಾ ಹುಟ್ಟುಹಾಕಿದ್ರು. ಆದ್ರೀಗ ಚೀನಾ ಕಮ್ಯೂನಿಸ್ಟ್​ ಸರ್ಕಾರದ ಒತ್ತಡದಿಂದಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ ಅಂತ ಮೂಲಗಳು ತಿಳಿಸಿವೆ. ಈ ಯೂನಿವರ್ಸಿಟಿಯಲ್ಲಿ ಎಕ್ಸಿಕ್ಯುಟಿವ್ ಮತ್ತು ಉದ್ಯಮಿಗಳಿಗೆ ತರಬೇತಿ ನೀಡೋ ಒಂದು ಕೇಂದ್ರವಾಗಿದ್ದು, ಇದು ಜಾಕ್​ ಮಾರ ಹೋಮ್​ಟೌನ್​​ ಹಾಂಗ್​ಶೌನಲ್ಲಿದೆ. ಆದ್ರೆ ಇತ್ತೀಚೆಗೆ ಹುಪಾನ್​​ ಯೂನಿವರ್ಸಿಟಿ ಅನ್ನೋ ಹೆಸರು ಚೇಂಜ್ ಮಾಡಿ, ಹುಪಾನ್ ಇನ್ನೋವೇಷನ್ ಸೆಂಟರ್ ಅಂತ ಮರುನಾಮಕರಣ ಮಾಡಲಾಗಿತ್ತು. ಯಾಕಂದ್ರೆ ಇಲ್ಲಿ ಡಿಗ್ರಿಗಳನ್ನು ನೀಡುತ್ತಿರಲಿಲ್ಲ.. ಜಸ್ಟ್ ಟ್ರೇನಿಂಗ್ ಮಾತ್ರ ನೀಡಲಾಗ್ತಿತ್ತು. ಹೀಗಾಗಿ ಯುನಿವರ್ಸಿಟಿ ಅನ್ನೋ ಪದ ತೆಗೆಯಲಾಗಿತ್ತು. ಇಲ್ಲಿ ಕಮ್ಯೂನಿಸ್ಟ್​ ತತ್ವಗಳಿಗೆ ವಿರುದ್ಧವಾಗಿ ಪಾಠ ಮಾಡಲಾಗುತ್ತೆ ಅಂತ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ಶಾಲೆಯ ಪಠ್ಯಕ್ರಮವನ್ನು ಕೂಡ ಪುನರ್​ ರಚಿಸಲು ನಿರ್ಧರಿಸಲಾಗಿದೆ. ಇದ್ರ ಬೆನ್ನಲ್ಲೇ ಈಗ ಜಾಕ್​ ಮಾ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯೋಕೆ ನಿರ್ಧರಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ್ದ ಜಾಕ್​ ಮಾ, ಚೀನಾದ ಹಣಕಾಸು ಪ್ರಾಧಿಕಾರದ ಕುರಿತು ಒಂದಷ್ಟು ಹೇಳಿಕೆಗಳನ್ನು ಕೊಟ್ಟಿದ್ರು. ವಿರುದ್ಧವಾಗಿ ಮಾತನಾಡಿದ್ರು. ಅಷ್ಟೆ.. ಅಲ್ಲಿಂದ ನಿರಂತರವಾಗಿ ಜಾಕ್​ಮಾರನ್ನ ತುಳಿಯೋಕೆ ಯತ್ನಿಸುತ್ತಿದೆ ಚೀನಾ ಸರ್ಕಾರ. ಇವರ ಮಾಲೀಕತ್ವದ ಆಂಟ್ ಗ್ರೂಪ್​​ನ initial public offeringನ್ನೂ ಕೂಡ ಅಧಿಕಾರಿಗಳು ತಡೆದಿದ್ರು. ಅಲ್ಲದೆ ಈ ಹೇಳಿಕೆ ನೀಡಿದ ಬಳಿಕ ಜಾಕ್​ ಮಾ ಕೂಡ ನಂತರದಲ್ಲಿ ವಿಡಿಯೋ ಸಂವಾದ ಮೂಲಕ ಕಾಣಿಸಿಕೊಂಡಿದ್ದು ಬಿಟ್ರೆ, ಸಾರ್ವಜನಿಕವಾಗಿ ಜಾಸ್ತಿ ಕಾಣಿಸಿಕೊಳ್ಳಲೇ ಇಲ್ಲ.

-masthmagaa.com

Contact Us for Advertisement

Leave a Reply