ತಾಲಿಬಾನಿಗಳ ಜೊತೆ ಚೀನಾ ಮಾತುಕತೆ: ಎಲ್ಲಿ ಗೊತ್ತಾ?

masthmagaa.com:

ಅಫ್ಘಾನಿಸ್ತಾನವನ್ನು ಟೇಕೋವರ್ ಮಾಡಿದ ಬಳಿಕ ತಾಲಿಬಾನಿಗಳ ಜೊತೆ ಕಾಬೂಲ್​​ನಲ್ಲಿ ಮೊದಲ ಬಾರಿಗೆ ರಾಜತಾಂತ್ರಿಕ ಸಂಪರ್ಕ ಸಾಧಿಸಲಾಗಿದೆ ಅಂತ ಚೀನಾ ಅಧಿಕಾರಿಗಳು ತಿಳಿಸಿದ್ದಾರೆ. ಕಾಬೂಲ್​​ನಲ್ಲಿ ತಾಲಿಬಾನ್ ರಾಜಕೀಯ ವಿಭಾಗದ ಉಪ ಮುಖ್ಯಸ್ಥ ಅಬ್ದುಲ್ ಸಲಾಂ ಹನಾಫಿ ಮತ್ತು ಅಫ್ಘಾನಿಸ್ತಾನದಲ್ಲಿರೋ ಚೀನಾ ರಾಯಭಾರಿ ವಾಂಗ್ ಯು ನಡುವೆ ಮಾತುಕತೆ ನಡೆದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಚೀನಾ ಮತ್ತು ಅಫ್ಘನ್ ತಾಲಿಬಾನ್ ಯಾವುದೇ ಅಡ್ಡಿ ಇಲ್ಲದೆ ಪರಿಣಾಮಕಾರಿಯಾದ ಸಂವಹನ ಸಂಪರ್ಕ ಹೊಂದಿವೆ ಅಂತ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್​​ ವೆನ್ಬಿನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply