ʻಸೆಂಗೋಲ್‌ʼ ಕುರಿತು ಟೀಕೆ ಮಾಡಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಅಮಿತ್‌ ಶಾ!

masthmagaa.com:

ಹೊಸ ಸಂಸತ್ ಭವನದಲ್ಲಿ ʻಸೆಂಗೋಲ್ʼ ಇರಿಸುವ ಬಗ್ಗೆ ಟೀಕೆ ಮಾಡಿದ್ದ ಕಾಂಗ್ರೆಸ್‌ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಯಾಕೆ ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ದ್ವೇಷಿಸುತ್ತಿದೆ? ಅಂತ ಪ್ರಶ್ನಿಸಿದ್ದಾರೆ. ಇನ್ನು ಭಾರತದ ಸ್ವಾತಂತ್ರ್ಯವನ್ನ ಸಂಕೇತಿಸಲು ತಮಿಳುನಾಡಿನ ಪವಿತ್ರ ಶೈವ ಮಠ ಪಂಡಿತ್ ನೆಹರೂ ಅವರಿಗೆ ಪವಿತ್ರ ಸೆಂಗೋಲ್ ಅನ್ನು ನೀಡಿತ್ತು. ಆದರೆ ಅದನ್ನು ಕಾಂಗ್ರೆಸ್ ʻವಾಕಿಂಗ್ ಸ್ಟಿಕ್ʼ ಅಂತ ಪರಿಗಣಿಸಿ ಮ್ಯೂಸಿಯಂನಲ್ಲಿ ಇಟ್ಟಿದೆ. ಅಲ್ದೆ ಕಾಂಗ್ರೆಸ್, ಇತಿಹಾಸವನ್ನು ಬೋಗಸ್ ಅಂತ ಕರೆದು ಮತ್ತೊಂದು ನಾಚಿಕೆಗೇಡಿನ ಕೆಲಸ ಮಾಡಿದೆ ಅಂತ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ. ಅಂದ್ಹಾಗೆ ಲಾರ್ಡ್ ಮೌಂಟ್‌ಬ್ಯಾಟನ್, ಸಿ ರಾಜಗೋಪಾಲಾಚಾರಿ ಮತ್ತು ಜವಾಹರಲಾಲ್ ನೆಹರು ಅವ್ರು ಸೆಂಗೋಲ್‌ನ್ನ ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂಕೇತ ಅಂತ ಬಣ್ಣಿಸಿದ್ದಾರೆ ಅನ್ನೋದಕ್ಕೆ ಯಾವುದೇ ದಾಖಲೆಗಳಿಲ್ಲ. ಇದು ಕೇವಲ ʻಬೋಗಸ್‌ʼ ಅಂತ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು. ಅಲ್ದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರು ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ರಾಜದಂಡವನ್ನು ಬಳಸುತ್ತಿದ್ದಾರೆ ಅಂತ ಆರೋಪಿಸಿದ್ದರು.

-masthmagaa.com

Contact Us for Advertisement

Leave a Reply