ಬಾಹುಬಲಿಯಲಿ ಬಲ್ಲಾಳದೇವನಾಗಿ ಅಬ್ಬರಿಸಿದ್ದ ರಾಣಾ ದಗ್ಗುಬಾಟಿ ಫುಲ್ ವೀಕ್ ಆಗಿದ್ದಾರೆ. ಇತ್ತೀಚೆಗೆ ಅವರು ಇನ್ಸ್ಟಾಗ್ರಾಂನಲ್ಲಿ ಜಾಹೀರಾತಿನ ಒಂದು ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ತುಂಬಾ ತೆಳ್ಳಗೆ ಕಾಣಿಸಿದ್ದಾರೆ. ಹೀಗಾಗಿ ಫ್ಯಾನ್ಸ್ ತುಂಬಾ ಬೇಸರ ಮತ್ತು ಆಶ್ಚರ್ಯದಲ್ಲಿ ಕಾಮೆಂಟ್ ಮಾಡಿ, ತೆಳ್ಳಗಾಗಿದ್ದು ಯಾಕೆ ಅಂತ ಕಾರಣ ಕೇಳುತ್ತಿದ್ದಾರೆ. ನಿಮ್ಮ ದೇಹಕ್ಕೆ ಏನಾಗಿದೆ ಅಂತ ಒಬ್ಬರು ಬರೆದಿದ್ರೆ, ಮತ್ತೊಬ್ಬರು ಖಾಯಿಲೆಗೆ ಬಿದ್ದಂತೆ ಕಾಣುತ್ತಿದ್ದೀರಿ. ಎಲ್ಲವೂ ಸರಿಯಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಬಲ್ಳಾಳದೇವನಿಗೆ ಏನಾಯ್ತು..? ಯಾಕೆ ಇಷ್ಟು ತೆಳ್ಳಗಾಗಿದ್ದೀರಿ..? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
https://www.instagram.com/p/B3B8U6FjXjC/?utm_source=ig_web_copy_link
Contact Us for Advertisement