ಮಾಧ್ಯಮಗಳ ಮುಂದೆ ರಷ್ಯಾ ಸೈನಿಕರ ಪರೇಡ್​ ಮಾಡಿದ ಯುಕ್ರೇನ್​!

masthmagaa.com:

ಯುಕ್ರೇನ್‌ ದಾಳಿಯಲ್ಲಿ ಬಂಧಿಸಿರೋ ರಷ್ಯಾ ಸೈನಿಕರನ್ನ ಯುಕ್ರೇನ್‌ ಸೇನೆ ಮಾಧ್ಯಮಗಳ ಮುಂದೆ ಪರೇಡ್​​ ಮಾಡಿದೆ. ನಂತರ ಯುಕ್ರೇನ್‌ ಮೇಲೆ ದಾಳಿ ಮಾಡಿದ್ದು ತಪ್ಪಾಯ್ತು ಅಂತ “ಹೇಳಿಸಲಾಗಿದೆ”. ಮಾಧ್ಯಮದ ಮುಂದೆ ಕರೆತರೋದಕ್ಕೂ ಮುನ್ನ, ಅವರಿಗೆ ರಷ್ಯಾ ಯುಕ್ರೇನ್‌ ಮೇಲೆ ಬಾಂಬ್‌ ಹಾಕ್ತಾ ಇರೋ ವೀಡಿಯೋಗಳನ್ನ ತೋರಿಸಿ “ನೋಡಿ ನಿಮ್ಮ ಆರ್ಮಿ ಏನ್‌ ಮಾಡ್ತಾ ಇದೆ ಅಂತ, ಅವ್ರು ನಿಮ್ಮ ತಂದೆತಾಯಿಗೆ ನೀವು ಇಲ್ಲಿದೀರಿ ಅಂತ ಹೇಳಲ್ಲ ಯುದ್ಧದಲ್ಲಿ ಸತ್ತೋಗಿದಿರಾ ಅಂತ ಹೇಳ್ತಾರೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ರೆಡ್‌ ಕ್ರಾಸ್‌ ಸಂಸ್ಥೆ, ಯುದ್ಧಾಪರಾಧಿಗಳನ್ನ ಕೆಟ್ಟದಾಗಿ ನಡೆಸಿಕೊಳ್ಳಬಾರ್ದು. ಗೌರವ ಮತ್ತು ಘನತೆಯಿಂದ ನೋಡಿಕೊಳ್ಳಬೇಕು ಅಂತ ಹೇಳಿದೆ. ಯುಕ್ರೇನ್‌ನ ಎಸ್‌ಬಿಯು ಗುಪ್ತಚರ ಸಂಸ್ಥೆ ಈ ವಾರದಲ್ಲಿ ಈ ರೀತಿ ನಡೆಸಿದ ಎರಡನೇ ಕೃತ್ಯ ಇದಾಗಿದೆ. ರಷ್ಯಾದ ಯುದ್ಧಾಪರಾಧಿಗಳಿಗೆ ಯುಕ್ರೇನ್​ ಟಾರ್ಚರ್‌ ನೀಡ್ತಿದೆ ಅಂತ ರಷ್ಯಾ ಸಿಟ್ಟಿಗೆದ್ದಿದೆ.
-ಇನ್ನು ಮತ್ತೊಂದ್‌ ಕಡೆ ಯುಕ್ರೇನ್‌, ವಶಪಡಿಸಿಕೊಂಡಿರೋ ರಷ್ಯನ್‌ ಸೈನಿಕರನ್ನ ಅವರ ತಾಯಂದಿರು ಪೊಲ್ಯಾಂಡ್‌ ಗಡಿ ಮೂಲಕ ಬಂದು ಕರೆದುಕೊಂಡು ಹೋಗುವಂತೆ ವೆಬ್‌ಸೈಟ್‌ ಒಂದನ್ನ ಕ್ರಿಯೇಟ್​ ಮಾಡಲಾಗಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಯುಕ್ರೇನ್‌ ಸೇನೆ, ನಾವು ಪುಟಿನ್‌ನ ನಿರಂಕುಶವಾದಿಗಳಂತೆ ಅಲ್ಲ, ನಾವು ತಾಯಂದಿರು ಮತ್ತು ಅವರ ಬಂದಿತ ಮಕ್ಕಳ ವಿರುದ್ಧ ಯುದ್ಧ ಮಾಡಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply