ನನ್ನನ್ನ ಜೈಲಿಗೆ ಕಳಿಸಿದ್ರೆ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿ ಆಗ್ತೀನಿ: ಇಮ್ರಾನ್‌ ಖಾನ್

masthmagaa.com:

ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ ಪಕ್ಷದ ನಾಯಕ ಇಮ್ರಾನ್‌ ಖಾನ್‌ ಅಲ್ಲಿನ ಸರ್ಕಾರಕ್ಕೆ ಮತ್ತೆ ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನ ಜೈಲಿಗೆ ಕಳಿಸಿದ್ರೆ, ನಾನು ಇನ್ನಷ್ಟು ಡೇಂಜರ್‌ ಆಗ್ತೀನಿ ಅಂತ ಹೇಳಿದ್ದಾರೆ. ಖಾನ್‌ ವಿರುದ್ದದ ಭಯೋತ್ಪಾದನೆ ಪ್ರಕರಣದ ವಿಚಾರಣೆ ವೇಳೆ ಇಸ್ಲಾಮಾಬಾದ್‌ ಹೈಕೋರ್ಟ್‌ ಹೊರಗೆ ಭಾರಿ ಭದ್ರತೆ ನಿಯೋಜಿಸಲಾಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಖಾನ್‌, ನನ್ನನ್ನ ಜೈಲಿಗೆ ಕಳಿಸಿದ್ರೆ ನಾನು ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿ ಅಂತ ಸಾಬೀತುಪಡಿಸ್ತೀನಿ ಅಂತ ಕಿಡಿಕಾರಿದ್ದಾರೆ. ಅಂದ್ರೆ ಬೆಂಬಲಿಗರ ಮೂಲಕ ದಂಗೆ ಏಳುವ ಬೆದರಿಕೆ ಹಾಕ್ತಿದ್ದಾರೆ. ಈ ಹಿಂದೆ ಕೂಡ ಇಮ್ರಾನ್ ಖಾನ್ ಬಂಧಿಸಿದ್ರೆ ರಾಜಧಾನಿ ಇಸ್ಲಮಾಬಾದ್ ಗೆ ಮುತ್ತಿಗೆ ಹಾಕ್ತೀವಿ.., ದಂಗೆ ಏಳ್ತೀವಿ ಅಂತ ಅವರ ಬೆಂಬಲಿಗರು ಬೆದರಿಕೆ ಹಾಕಿದ್ದರು. ಹಾಗೆ, ಕಳೆದ ಆಗಸ್ಟ್‌ 20 ರಂದು ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ಖಾನ್‌ರ ವಿರುದ್ದ ಈ ಪ್ರಕರಣ ದಾಖಲಾಗಿತ್ತು. ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡ ಬಳಿಕ ಒಂಥರಾ ಆಡ್ತಿದ್ದಾರೆ. ಇದು ವಿದೇಶೀ ಕೈವಾಡದ ಸರ್ಕಾರ. ಇವ್ರನ್ನ ಕಿತ್ತೊಗಿಬೇಕು. ಬನ್ನಿ ದಂಗೆ ಏಳಣ ಅಂತ ಜನಕ್ಕೆ ಕರೆ ಕೊಡ್ತಿದ್ದಾರೆ. ದುರದೃಷ್ಟವಶಾತ್ ಇದಕ್ಕೆ ಒಳ್ಳೇ ಸ್ಪಂದನೆ ಕೂಡ ಸಿಗ್ತಿದೆ. ರಾತ್ರಿ ವೇಳೆ ನಡೆಯೋ ಇಮ್ರಾನ್ ಖಾನ್ ರ್ಯಾಲಿಗಳಿಗೆ ಜನ ರಾಕ್ – ಪಾಪ್ ಶೋ ನೋಡೋಕೆ ಬಂದ ರೀತಿಲಿ ಮುಗಿಬಿದ್ದು ಬರ್ತಿದ್ದಾರೆ. ಯುವ ಜನತೆ ಜಾಸ್ತಿ ಕಾಣ್ತಿದ್ದಾರೆ. ವಿಶೇಷ ಅಂದ್ರೆ ಯುವತಿಯರೂ ದೊಡ್ಡ ಸಂಖ್ಯೆಯಲ್ಲಿ ಬರ್ತಿದ್ದಾರೆ. ಇದರಲ್ಲಿ ಅರ್ಧಕ್ಕರ್ಧ ಮಹಿಳೆಯರು ಯಾವುದೇ ಹಿಜಬ್, ಬುರ್ಖಾ ಇಲ್ಲದೆ ಬರ್ತಿದ್ದಾರೆ. ಇಮ್ರಾನ್ ಖಾನ್ ಒಂತರ ಪೊಲಿಟಿಕಲ್ ರಾಕ್ ಸ್ಟಾರ್ ಥರ ಆಗೋಗಿದ್ದಾರೆ ಪಾಕಿಸ್ತಾನದಲ್ಲಿ.

-masthmagaa.com

Contact Us for Advertisement

Leave a Reply