‘ಹೈದ್ರಾಬಾದ್​ನಲ್ಲಿ ಸರ್ಜಿಕಲ್​ ಸ್ಟ್ರೈಕ್ ಮಾಡ್ತೀವಿ’ ಎಂದ ಬಿಜೆಪಿಗೆ ಚೀನಾ ನೆನಪಿಸಿದ ಓವೈಸಿ

masthmagaa.com:

‘ಹೈದರಾಬಾದ್ ಮಹಾ ನಗರ ಪಾಲಿಕೆ (GHMC) ಚುನಾವಣೆಯಲ್ಲಿ ನಾವು ಗೆದ್ದ ಬಳಿಕ ಹೈದರಾಬಾದ್​​ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡ್ತೀವಿ’ ಅಂತ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ‘ಟಿಆರ್​ಎಸ್​ ಮತ್ತು ಎಐಎಂಐಎಂ ಪಕ್ಷಗಳು ರೊಹಿಂಗ್ಯಾ, ಪಾಕಿಸ್ತಾನಿ ಮತ್ತು ಅಫ್ಘನಿಸ್ತಾನಿ ಮತದಾರರಿಂದ GHMC ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿವೆ. ಈ ಚುನಾವಣೆಯಲ್ಲಿ ಪಾಕಿಸ್ತಾನ, ಅಫ್ಘನಿಸ್ತಾನ ಮತ್ತು ರೊಹಿಂಗ್ಯಾಗಳಿಗೆ ಮತದಾನ ಮಾಡಲು ಬಿಡಬಾರದು. ನಾವು ಈ ಚುನಾವಣೆ ಗೆದ್ದ ಬಳಿಕ ಹೈದರಾಬಾದ್​ ಓಲ್ಡ್ ಸಿಟಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡ್ತೀವಿ’ ಅಂತ ಹೇಳಿದ್ದಾರೆ. ಅಂದ್ಹಾಗೆ ಹೈದರಾಬಾದ್​ ಓಲ್ಡ್​ ಸಿಟಿ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶವಾಗಿದೆ.

ಬಿಜೆಪಿ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಎಐಎಂಐಎಂ ಸಂಸದ ಅಸಾದುದ್ದಿನ್ ಓವೈಸಿ, ‘ಮೊದಲು ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ, ಆಮೇಲೆ ಹೈದರಾಬಾದ್​ಗೆ ಬನ್ನಿ’ ಅಂತ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇತ್ತೀಚೆಗೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಕೂಡ ವಿವಾದಾತ್ಮಕ ಹೇಳಿಕೆಗಳನ್ನ ಕೊಟ್ಟಿದ್ದರು. ‘ಓವೈಸಿಗೆ ಬೀಳುವ ಪ್ರತಿಯೊಂದು ಮತವೂ ಭಾರತ ವಿರೋಧಿ’ ಅಂತ ಹೇಳಿದ್ದರು. ಅಲ್ಲದೆ ಹೈದರಾಬಾದ್​ ಅನ್ನು ‘ಭಾಗ್ಯನಗರ’ ಅಂತ ಕರೆದಿದ್ದರು. ಇದರಿಂದ ಟ್ರೋಲ್​ಗೂ ಗುರಿಯಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಓವೈಸಿ, ‘ಈ ಚುನಾವಣೆ ಹೈದರಾಬಾದ್ ಮತ್ತು ಭಾಗ್ಯನಗರಗಳ ನಡುವಿನ ಫೈಟ್. ಇದು ಹೈದರಾಬಾದೋ ಅಥವಾ ಭಾಗ್ಯನಗರವೋ ಅನ್ನೋದನ್ನ ನಿರ್ಧರಿಸುವ ಜವಾಬ್ದಾರಿ ಈಗ ಜನರ ಕೈಯಲ್ಲಿದೆ’ ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply