ಇಮ್ರಾನ್​ ಖಾನ್​ರಿಂದ ನವಾಜ್‌ ಷರೀಫ್​ ಪುತ್ರಿಯ ಕೇಸ್‌ ರೀ ಓಪನ್‌!

masthmagaa.com:

ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಮಿತಿ ನವಾಜ್ ಷರೀಫ್ ಪುತ್ರಿ ಮರ್ಯಮ್ ನವಾಜ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಕೇಸ್​​ನ್ನು ರೀ ಓಪನ್ ಮಾಡಿದೆ. ಮಾರ್ಚ್ 26ರಂದು ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದೆ. ಇದೇ ಮಾರ್ಚ್ 26ರಂದು ವಿಪಕ್ಷಗಳೆಲ್ಲಾ ಒಟ್ಟಾಗಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಬೃಹತ್ ಮೆರವಣಿಗೆಗೆ ಕರೆ ನೀಡಿವೆ. ಪಿಎಂಎಲ್​​​​-ಎನ್​​​ ಪಕ್ಷದ ನಾಯಕಿ ಮರ್ಯಮ್ ನೇತೃತ್ವದಲ್ಲೇ ಈ ಮಾರ್ಚ್​​​​​ಗೆ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಆದ್ರೀಗ ಅವರನ್ನು ಅದೇ ದಿನ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ.

ಅಂದಹಾಗೆ 47 ವರ್ಷದ ಮರ್ಯಮ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ತಮ್ಮ ತಂದೆ ನವಾಜ್ ಷರೀಫ್ ಪ್ರಧಾನಿಯಾಗಿದ್ದಾಗ 1992-93ರ ಅವಧಿಯಲ್ಲಿ ವಿದೇಶಿಯರ ಜೊತೆ ಸೇರಿಕೊಂಡು ಅಕ್ರಮವಾಗಿ ಚೌಧರಿ ಸಾಗರ್ ಮಿಲ್ಸ್​ನಲ್ಲಿ ಹೂಡಿಕೆ ಮಾಡಿದ್ದಾರೆ ಅಂತ ಹೇಳಲಾಗಿತ್ತು. ಜೊತೆಗೆ ಲಂಡನ್​​​ನಲ್ಲಿರೋ ಐಷಾರಾಮಿ ಅಪಾರ್ಟ್​​ಮೆಂಟ್​​​​​​​ಗಳ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2018ರಲ್ಲಿ ಮರ್ಯಮ್ ಅವರಿಗೆ 7 ವರ್ಷ ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಆದ್ರೆ ನಂತರದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್​​ ಜೈಲು ಶಿಕ್ಷೆಯನ್ನು ರದ್ದುಗೊಳಿಸಿತ್ತು.

-masthmagaa.com

Contact Us for Advertisement

Leave a Reply