ಇಸ್ರೇಲ್​ ಮೂಲದ ಎನ್​ಎಸ್​ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಸಸ್​ ಸಾಫ್ಟ್​ವೇರ್​ ಮೂಲಕ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಮಾನವ ಹಕ್ಕು ಹೋರಾಟಗಾರರು ಸೇರಿದಂತೆ ಹಲವರ ಮೇಲೆ ರಹಸ್ಯವಾಗಿ ಕಣ್ಣಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೀಬೇಕು ಅಂತ ವಿಪಕ್ಷಗಳು ಆಗ್ರಹಿಸಿವೆ. ಯಾರ್ಯಾರು ಏನೇನ್​ ಹೇಳಿದ್ದಾರೆ ಅಂತ ಕ್ವಿಕ್​ ಆಗಿ ನೋಡಣ.. GFX ನಮ್ಮ ಫೋನ್​ಗಳನ್ನ ಟ್ರಾಪ್​ ಮಾಡಿದ್ದಾರೆ. ಹೀಗಾಗಿ ನನ್ನ ಫೋನ್ ಅನ್ನೇ ಬಂದ್ ಮಾಡಿ ಇಟ್ಟಿದ್ದೀನಿ. ನಾವು ಕೇಂದ್ರ ಸರ್ಕಾರವನ್ನ ಕೂಡ ಬಂದ್ ಮಾಡ್ಬೇಕು. ಇಲ್ಲದಿದ್ರೆ ದೇಶ ಹಾಳಾಗುತ್ತೆ. – ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ ಪ್ರಧಾನಿ ಮೋದಿ 2017ರಲ್ಲಿ ಇಸ್ರೇಲ್​​ ಪ್ರವಾಸ ಹೋಗಿದ್ದರು. ಅದಾದ ಬಳಿಕವೇ ಫೋನ್​ ಟ್ರಾಪ್ ಆಗಲು ಶುರುವಾಗಿದೆ. – ಕಮಲ್​​ನಾಥ್​, ಮಾಜಿ ಮಧ್ಯಪ್ರದೇಶ ಸಿಎಂ NSO ಗ್ರೂಪ್​​ನ ಅಧಿಕಾರಿಗಳು ಈ ಹಿಂದೆ ಛತ್ತೀಸ್​ಗಢಕ್ಕೆ ಬಂದು ಕೆಲವರನ್ನ ಭೇಟಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನ ರಚಿಸಿದ್ದೇವೆ. ಪೆಗಸಸ್​ ಸಾಫ್ಟ್​ವೇರ್ ಅನ್ನ ಸರ್ಕಾರಗಳಿಗೆ ಮಾತ್ರ ಕೊಡೋದು ಅಂತ NSO ಗ್ರೂಪ್​ ಹೇಳಿದೆ. ಹೀಗಾಗಿ ಸರ್ಕಾರ ಈ ಡೀಲ್ ಮಾಡ್ಕೊಂಡಿದ್ಯಾ, ಇಲ್ವಾ ಅನ್ನೋದನ್ನ ಹೇಳಬೇಕು. – ಭೂಪೇಶ್ ಭಗೇಲ್​, ಛತ್ತೀಸ್​ಗಢ ಸಿಎಂ ನಮ್ಮ ಬಳಿ ಮುಚ್ಚಿಡಲು ಏನೂ ಇಲ್ಲ ಅಂತಾದ್ರೆ ಪ್ರಧಾನಿ ಮೋದಿ ಇಸ್ರೇಲ್​ ಪ್ರಧಾನಿಗೆ ಪತ್ರ ಬರೆಯಬೇಕು. ಈ ಮೂಲಕ ಪೆಗಸಸ್​ ಪ್ರಾಜೆಕ್ಟ್​ಗೆ ಯಾರು ದುಡ್ಡು ಕೊಟ್ಟಿದ್ದಾರೆ ಅನ್ನೋದನ್ನ ಪತ್ತೆಹಚ್ಚಬೇಕು. – ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ ಭಾರತದ ವಿರುದ್ಧ ವಿದೇಶಿ ಮಾಧ್ಯಮಗಳು ಸೇರಿ ಮಾಡಿದ ತಪ್ಪು ಮಾಹಿತಿಯ ಅಭಿಯಾನ ಇದು ಎನ್ನಲಾಗ್ತಿದೆ. ಈ ಹಿಂದೆ ಕೂಡ ಸ್ವಿಸ್​ ಬ್ಯಾಂಕ್ ಅಕೌಂಟ್​​ಗಳಿಗೆ ಸಂಬಂಧಿಸಿದಂತೆ ಇಂಥಾ ಅಭಿಯಾನ ಮಾಡಲಾಗಿತ್ತು. ಡಿಜಿಟಲ್​ ಪ್ಲಾಟ್​​ಫಾರ್ಮ್​ಗಳನ್ನ ಬಳಸಿಕೊಂಡು ಅವರು ವಿವಿಧ ದೇಶಗಳನ್ನ ಅಸ್ಥಿರಗೊಳಿಸಲು ಪ್ರಯತ್ನ ಪಡ್ತಿದ್ದಾರೆ. ಭಾರತ ಈಗ ಶಕ್ತಿಶಾಲಿಯಾಗಿ ಬೆಳೆಯುತ್ತಿರೋದ್ರಿಂದ ಅವರ ಕಣ್ಣು ಈಗ ಭಾರತದ ಮೇಲೆ ನೆಟ್ಟಿದೆ. – ಬಸವರಾಜ ಬೊಮ್ಮಾಯಿ, ಕರ್ನಾಟಕ ಗೃಹ ಸಚಿವ

masthmagaa.com:

ಇಸ್ರೇಲ್​ ಮೂಲದ ಎನ್​ಎಸ್​ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಸಸ್​ ಸಾಫ್ಟ್​ವೇರ್​ ಮೂಲಕ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಮಾನವ ಹಕ್ಕು ಹೋರಾಟಗಾರರು ಸೇರಿದಂತೆ ಹಲವರ ಮೇಲೆ ರಹಸ್ಯವಾಗಿ ಕಣ್ಣಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೀಬೇಕು ಅಂತ ವಿಪಕ್ಷಗಳು ಆಗ್ರಹಿಸಿವೆ. ಯಾರ್ಯಾರು ಏನೇನ್​ ಹೇಳಿದ್ದಾರೆ ಅಂತ ಕ್ವಿಕ್​ ಆಗಿ ನೋಡಣ..
ನಮ್ಮ ಫೋನ್​ಗಳನ್ನ ಟ್ರಾಪ್​ ಮಾಡಿದ್ದಾರೆ. ಹೀಗಾಗಿ ನನ್ನ ಫೋನ್ ಅನ್ನೇ ಬಂದ್ ಮಾಡಿ ಇಟ್ಟಿದ್ದೀನಿ. ನಾವು ಕೇಂದ್ರ ಸರ್ಕಾರವನ್ನ ಕೂಡ ಬಂದ್ ಮಾಡ್ಬೇಕು. ಇಲ್ಲದಿದ್ರೆ ದೇಶ ಹಾಳಾಗುತ್ತೆ.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ಪ್ರಧಾನಿ ಮೋದಿ 2017ರಲ್ಲಿ ಇಸ್ರೇಲ್​​ ಪ್ರವಾಸ ಹೋಗಿದ್ದರು. ಅದಾದ ಬಳಿಕವೇ ಫೋನ್​ ಟ್ರಾಪ್ ಆಗಲು ಶುರುವಾಗಿದೆ.
– ಕಮಲ್​​ನಾಥ್​, ಮಾಜಿ ಮಧ್ಯಪ್ರದೇಶ ಸಿಎಂ

NSO ಗ್ರೂಪ್​​ನ ಅಧಿಕಾರಿಗಳು ಈ ಹಿಂದೆ ಛತ್ತೀಸ್​ಗಢಕ್ಕೆ ಬಂದು ಕೆಲವರನ್ನ ಭೇಟಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನ ರಚಿಸಿದ್ದೇವೆ. ಪೆಗಸಸ್​ ಸಾಫ್ಟ್​ವೇರ್ ಅನ್ನ ಸರ್ಕಾರಗಳಿಗೆ ಮಾತ್ರ ಕೊಡೋದು ಅಂತ NSO ಗ್ರೂಪ್​ ಹೇಳಿದೆ. ಹೀಗಾಗಿ ಸರ್ಕಾರ ಈ ಡೀಲ್ ಮಾಡ್ಕೊಂಡಿದ್ಯಾ, ಇಲ್ವಾ ಅನ್ನೋದನ್ನ ಹೇಳಬೇಕು.
– ಭೂಪೇಶ್ ಭಗೇಲ್​, ಛತ್ತೀಸ್​ಗಢ ಸಿಎಂ

ನಮ್ಮ ಬಳಿ ಮುಚ್ಚಿಡಲು ಏನೂ ಇಲ್ಲ ಅಂತಾದ್ರೆ ಪ್ರಧಾನಿ ಮೋದಿ ಇಸ್ರೇಲ್​ ಪ್ರಧಾನಿಗೆ ಪತ್ರ ಬರೆಯಬೇಕು. ಈ ಮೂಲಕ ಪೆಗಸಸ್​ ಪ್ರಾಜೆಕ್ಟ್​ಗೆ ಯಾರು ದುಡ್ಡು ಕೊಟ್ಟಿದ್ದಾರೆ ಅನ್ನೋದನ್ನ ಪತ್ತೆಹಚ್ಚಬೇಕು.
– ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ

ಭಾರತದ ವಿರುದ್ಧ ವಿದೇಶಿ ಮಾಧ್ಯಮಗಳು ಸೇರಿ ಮಾಡಿದ ತಪ್ಪು ಮಾಹಿತಿಯ ಅಭಿಯಾನ ಇದು ಎನ್ನಲಾಗ್ತಿದೆ. ಈ ಹಿಂದೆ ಕೂಡ ಸ್ವಿಸ್​ ಬ್ಯಾಂಕ್ ಅಕೌಂಟ್​​ಗಳಿಗೆ ಸಂಬಂಧಿಸಿದಂತೆ ಇಂಥಾ ಅಭಿಯಾನ ಮಾಡಲಾಗಿತ್ತು. ಡಿಜಿಟಲ್​ ಪ್ಲಾಟ್​​ಫಾರ್ಮ್​ಗಳನ್ನ ಬಳಸಿಕೊಂಡು ಅವರು ವಿವಿಧ ದೇಶಗಳನ್ನ ಅಸ್ಥಿರಗೊಳಿಸಲು ಪ್ರಯತ್ನ ಪಡ್ತಿದ್ದಾರೆ. ಭಾರತ ಈಗ ಶಕ್ತಿಶಾಲಿಯಾಗಿ ಬೆಳೆಯುತ್ತಿರೋದ್ರಿಂದ ಅವರ ಕಣ್ಣು ಈಗ ಭಾರತದ ಮೇಲೆ ನೆಟ್ಟಿದೆ.
– ಬಸವರಾಜ ಬೊಮ್ಮಾಯಿ, ಕರ್ನಾಟಕ ಗೃಹ ಸಚಿವ

-masthmagaa.com

Contact Us for Advertisement

Leave a Reply