2024ರ IPL ವೇಳೆಗೆ ರಿಷಭ್‌ ಪಂತ್‌ ರೆಡಿ? ಗಂಗೂಲಿ ಹೇಳಿದ್ದೇನು?

masthmagaa.com:

2024ರ IPL ನಲ್ಲಿ ರಿಷಭ್‌ ಪಂತ್‌ ಆಡಲಿದ್ದಾರೆ ಅಂತ ಡೆಲ್ಲಿ ಕ್ಯಾಪಿಟಲ್ಸ್‌ ಟೀಮ್‌ ಡೈರೆಕ್ಟರ್‌ ಹಾಗೂ ಭಾರತದ ಕ್ರಿಕೆಟ್‌ ಟೀಮ್‌ ಮಾಜಿ ಕ್ಯಾಪ್ಟನ್‌ ಸೌರವ್‌ ಗಂಗೂಲಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು ʻಪಂತ್‌ ಈಗ‌ ಆಲ್‌ಮೋಸ್ಟ್ ಫಿಟ್‌ ಆಗಿದ್ದಾರೆ. ಅವ್ರು ಮುಂದಿನ ಸೀಸನ್‌ನಲ್ಲಿ ಆಡಲಿದ್ದಾರೆ. ಬರುವ ಹರಾಜು ಪ್ರಕ್ರಿಯೆ ಬಗ್ಗೆ ಮಾತನಾಡೋಕೆ ಮೀಟಿಂಗ್‌ ನಡೆಸಲಾಗಿತ್ತು. ಈ ವೇಳೆ ತಂಡದ ಕ್ಯಾಪ್ಟನ್‌ ಆಗಿದ್ರಿಂದ ಪಂತ್‌ ಪಾಲ್ಗೊಂಡಿದ್ರುʼ ಅಂದಿದ್ದಾರೆ. ಅಂದ್ಹಾಗೆ ಕಳೆದ ಡಿಸೆಂಬರ್‌ನಲ್ಲಿ ಭಾರಿ ರಸ್ತೆ ಅಪಘಾತದಲ್ಲಿ ಸೀವಿಯರ್‌ ಆಗಿ ಗಾಯಗೊಂಡಿದ್ದ ಪಂತ್‌ ಈಗಷ್ಟೇ ಮತ್ತೆ ಅಭ್ಯಾಸ ಮಾಡೋಕೆ ಶುರು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply