masthmagaa.com:

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ನಡೆದ ನೂಕಾಟ, ತಳ್ಳಾಟದಿಂದ ಈಗ ಊಹಿಸಲಾಗದ ನಷ್ಟ ಉಂಟಾಗಿದೆ. ನೂಕಾಟ, ತಳ್ಳಾಟಕ್ಕೆ ಒಳಗಾಗಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್​ಗೆ ಗರ್ಭಪಾತ ಆಗಿದೆ. ಅವರು 3 ತಿಂಗಳ ಗರ್ಭಿಣಿಯಾಗಿದ್ದರು ಅಂತ ಅವರ ಪತಿ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಚುನಾವಣೆಯ ದಿನ ಬಿಜೆಪಿ ಶಾಸಕ ಸಿದ್ದು ಸವದಿ ಮತ್ತು ಅವರ ಬೆಂಬಲಿಗರು ಚಾಂದಿನಿ ನಾಯಕ್ ಸೇರಿದಂತೆ ಒಟ್ಟು ಮೂರು ಮಹಿಳಾ ಸದಸ್ಯರನ್ನ ಎಳೆದಾಡಿದ್ದರು. ಬಿಜೆಪಿಯ ಚಾಂದಿನಿ ನಾಯಕ್ ಮತ್ತು ಇತರರು ಕಾಂಗ್ರೆಸ್​ ಪರವಾಗಿ ಮತ ಚಲಾಯಿಸಲಿದ್ದಾರೆ ಎಂಬ ಮಾಹಿತಿ ಶಾಸಕರಿಗೆ ಸಿಕ್ಕಿತ್ತು. ಹೀಗಾಗಿ ಅವರು ಚುನಾವಣೆಯಲ್ಲಿ ಭಾಗವಹಿಸದಂತೆ ತಡೆದಿದ್ದರು. ಇದರ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಘಟನೆ ನಡೆದು ಹಲವು ದಿನಗಳ ಬಳಿಕ ಚಾಂದಿನಿ ನಾಯಕ್ ಗರ್ಭಪಾತಕ್ಕೆ ಒಳಗಾಗಿದ್ದಾರೆ.

-masthmagaa.com

Contact Us for Advertisement

Leave a Reply